ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ಮುಲ್ಕಿ ಸಮೀಪದ ಹೆಜಮಾಡಿ ಟೋಲ್ ಬಳಿ ಮೀನಿನ ಈಚರ್ ಲಾರಿ ಶುಕ್ರವಾರ ಮಧ್ಯರಾತ್ರಿ ಟೋಲ್ ಮಾರ್ಗಸೂಚಿ ಕಂಬಕ್ಕೆ ಡಿಕ್ಕಿ ಹೊಡೆದು ಲಾರಿಯಲ್ಲಿದ್ದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಭೀರ ಗಾಯಗೊಂಡವರನ್ನು ಈಚರ್ ಲಾರಿ ಚಾಲಕ ಕೇರಳ ವಯನಾಡು ನಿವಾಸಿ ಜಾಶಿರ್ ಮತ್ತು ನಿರ್ವಾಹಕ ಸವಾದ್ ಎಂದು ಗುರುತಿಸಲಾಗಿದೆ.
ಮಲ್ಪೆ ಯಿಂದ ಮಂಗಳೂರು ಕಡೆಗೆ ಮೀನು ಹೇರಿಕೊಂಡು ಹೋಗುತ್ತಿದ್ದ ಈಚರ್ ಲಾರಿ ಶುಕ್ರವಾರ ಮಧ್ಯರಾತ್ರಿ 1.45 ರ ವೇಳೆಗೆ ಹೆಜಮಾಡಿ ಟೋಲ್ ಸಮೀಪ ಗ್ರೀನ್ ತಡ್ಕ ಹೋಟೆಲ್ ಎದುರು ಬದಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಮಾರ್ಗಸೂಚಿ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಈಚರ್ ಲಾರಿಯ ಎದುರು ಭಾಗ ನಜ್ಜುಗುಜ್ಜಾಗಿದ್ದು ಚಾಲಕ ಮತ್ತು ನಿರ್ವಾಹಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
18/09/2021 10:38 am