ಮುಲ್ಕಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಕಾಪಿಕಾಡು ಬಳಿ ಗುರುವಾರ ಬೆಳಿಗ್ಗೆ ಪಿಕಪ್ ಟೂರಿಸ್ಟ್ ಕಾರ್ ಗೆ ಡಿಕ್ಕಿ ಹೊಡೆದಿದ್ದು ಕಾರು ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾನೆ.
ಮುಲ್ಕಿ ಯ ಲಿಂಗಪ್ಪಯ್ಯ ಕಾಡಿನಿಂದ ಕಟ್ಟಡದ ಕಬ್ಬಿಣದ ಸಾಮಗ್ರಿಗಳನ್ನು ಹೇರಿಕೊಂಡು ಕಟೀಲು ಕಡೆಗೆ ಹೊರಟಿದ್ದ ಪಿಕಪ್ ವಾಹನ ಕಿನ್ನಿಗೋಳಿ ಉಲ್ಲಂಜೆ ಕಟೀಲು ರಸ್ತೆಯ ಮೆನ್ನಬೆಟ್ಟು ಹಳೆ ಪಂಚಾಯತ್ ಬಳಿ ತಲುಪುತ್ತಿದ್ದಂತೆ ವಾಹನದ ಸ್ಟ್ಯಾರಿಂಗ್ ರೋಡ್ ತುಂಡಾಗಿದೆ ಎನ್ನಲಾಗಿದೆ.
ಈ ಸಂದರ್ಭ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಬಜಪೆ ಏರ್ಪೋರ್ಟ್ ನಿಂದ ಉಡುಪಿ ಮಣಿಪಾಲ ಕಡೆಗೆ ಹೋಗುತ್ತಿದ್ದ ಟೂರಿಸ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಎರಡು ವಾಹನಗಳ ಎದುರು ಭಾಗ ಜಖಂಗೊಂಡಿದ್ದು ಟೂರಿಸ್ಟ್ ಕಾರು ಚಾಲಕ ಬಜ್ಪೆ ಬಳಿಯ ನಿವಾಸಿ ಅಬ್ದುಲ್ಲಾ ಎಂಬವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.
Kshetra Samachara
02/09/2021 10:32 am