ನಿಟ್ಟೆ : ಫಾಲ್ಸ್ ಗೆ ಈಜಲು ಹೋದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದೆ. ನಿಟ್ಟೆ ಗ್ರಾಮದ ಅರ್ಬಿ ಫಾಲ್ಸ್ ನಲ್ಲಿ ಈಜುವಾಗ ಈ ದುರ್ಘಟನೆ ನಡೆದಿದೆ.ವರ್ಷಿತಾ ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿ. ಮಂಗಳೂರಿನ ವರ್ಷಿತಾ ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಸಹಪಾಠಿಗಳ ಜೊತೆ ಪಾಲ್ಸ್ ಗೆ ತೆರಳಿ ಈಜಲೆಂದು ನೀರಿಗೆ ಇಳಿದಿದ್ದಳು.ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/08/2021 04:02 pm