ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿ: ಅಲೆಗಳ ಅಬ್ಬರಕ್ಕೆ ದೋಣಿ ಸಮುದ್ರ ಪಾಲು; ನಾಲ್ವರು ಮೀನುಗಾರರು ಪಾರು

ಉಡುಪಿ: ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದ ಘಟನೆ ಗಂಗೊಳ್ಳಿ ಸಮೀಪ ಗುರುವಾರ ಬೆಳಿಗ್ಗೆ ನಡೆದಿದ್ದು, ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಂಗೊಳ್ಳಿ ನಿವಾಸಿಗಳಾದ ಗುರುರಾಜ ಖಾರ್ವಿ (30), ಮಿಥುನ್ ಖಾರ್ವಿ (26), ಚಂದ್ರ ಖಾರ್ವಿ (45) ಮತ್ತು ರೋಶನ್ (35) ರಕ್ಷಿಸಲ್ಪಟ್ಟ ಮೀನುಗಾರರು.

ಗಂಗೊಳ್ಳಿ ಮೀನುಗಾರಿಕೆ ಬಂದರಿನಿಂದ ಗುರುವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ‘ಸೌಮ್ಯ’ ಹೆಸರಿನ ನಾಡದೋಣಿ ಸಮುದ್ರದಲ್ಲಿ ಗಂಗೊಳ್ಳಿಯಿಂದ ಸುಮಾರು 7 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿತು. ದೋಣಿಯಲ್ಲಿದ್ದ ಇಬ್ಬರು ಮೀನುಗಾರರು ನೀರಿಗೆ ಹಾರಿ ಈಜಿ ಇನ್ನೊಂದು ದೋಣಿ ಮೂಲಕ ಸುರಕ್ಷಿತವಾಗಿ ದಡ ಸೇರಿದರೆ, ಇನ್ನಿಬ್ಬರು ಮೀನುಗಾರರನ್ನು ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ದೋಣಿ, ಇಂಜಿನ್ ಮತ್ತು ಬಲೆ ಸಮುದ್ರ ಪಾಲಾಗಿದ್ದು, ಸುಮಾರು 5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು.

Edited By : Manjunath H D
Kshetra Samachara

Kshetra Samachara

28/01/2021 03:41 pm

Cinque Terre

24.1 K

Cinque Terre

0