ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಪಿಜಿನಡ್ಕದಲ್ಲಿ ಮನೆ ಬೆಂಕಿಗಾಹುತಿ; ಲಕ್ಷಾಂತರ ಮೌಲ್ಯದ ಸೊತ್ತು ನಾಶ

ಮಂಗಳೂರು: ಅಡುಗೆ ಮಾಡೋ ವೇಳೆ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ‌ ಬಿದ್ದು ಲಕ್ಷಾಂತರ ಮೌಲ್ಯದ ಸೊತ್ತು ನಷ್ಟವಾದ ಘಟನೆ ಬೆಳ್ತಂಗಡಿ ತಾಲೂಕಿನ ಪಿಜಿನಡ್ಕದಲ್ಲಿ ನಡೆದಿದೆ.

ಪಿಜಿನಡ್ಕ ನಿವಾಸಿ ಪಿ.ಕೆ. ಚೀಂಕ್ರ ಅವರ ಮನೆಯಲ್ಲಿ ಅಡುಗೆ ಮಾಡುವ ವೇಳೆ ಆಕಸ್ಮಿಕ ಬೆಂಕಿ ತಗುಲಿದೆ. ಈ ವೇಳೆ ಅಲ್ಲಿದ್ದ ರಬ್ಬರ್ ಶೀಟ್ ಗೆ ಬೆಂಕಿ ತಗುಲಿ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದರಿಂದ 3 ಕ್ವಿಂಟಾಲ್ ಗೂ ಅಧಿಕ‌ ರಬ್ಬರ್ ಶೀಟ್, ದಾಖಲೆ ಪತ್ರಗಳು ಮತ್ತು ಹಣ, ಚಿನ್ನ ಬೆಂಕಿಗಾಹುತಿಯಾಗಿದೆ.

ಒಟ್ಟು 2 ಲಕ್ಷ ಮೌಲ್ಯದ ರಬ್ಬರ್, ಮೆಣಸು ಸುಟ್ಟು ಕರಕಲಾಗಿದೆ. ಜೊತೆಗೆ 30, 000 ಹಣ ಮತ್ತು ಚಿನ್ನ, ದಾಖಲೆಪತ್ರಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಮನೆಗೆ ಆಧಾರವಾಗಿರುವ ಯಜಮಾನ ಕೆಲವು ದಿನಗಳ ಹಿಂದೆ ಮನೆ ಮುಂದೆ ಜಾರಿಬಿದ್ದು ನಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದೇ ಬೆನ್ನಲ್ಲೇ ಈ ಅವಘಡ ಸಂಭವಿಸಿದೆ‌.

Edited By : Manjunath H D
Kshetra Samachara

Kshetra Samachara

13/01/2021 09:57 pm

Cinque Terre

26.24 K

Cinque Terre

1