ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಳೆಯಂಗಡಿ: ಕಾರು ಪಲ್ಟಿ; ಚಾಲಕ ಅಪಾಯದಿಂದ ಪಾರು

ಮುಲ್ಕಿ: ಮಂಗಳೂರಿನಿಂದ ಕಿನ್ನಿಗೋಳಿಗೆ ಕಡೆಗೆ ತೆರಳುತ್ತಿದ್ದ ಕಾರೊಂದು ಹಳೆಯಂಗಡಿ ಸಮೀಪದ ತೋಕೂರು ಸರಕಾರಿ ಶಾಲೆಯ ಬಳಿ ಶುಕ್ರವಾರ ಮಧ್ಯಾಹ್ನ 2: 30ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಈ ಸಂದರ್ಭ ಕಾರಿನಲ್ಲಿದ್ದ ಚಾಲಕ ಸುಧಾಕರ್ ಶೆಟ್ಟಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ. ಮುಂದಿನಿಂದ ಹಠಾತ್ತಾಗಿ ಬಂದ ವಾಹನವೊಂದನ್ನು ತಪ್ಪಿಸುವ ಪ್ರಯತ್ನ ದಲ್ಲಿ ಚಾಲಕ ಸುಧಾಕರ ಶೆಟ್ಟಿ ಯವರ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ.

ಅಪಘಾತ ನಡೆದ ರಭಸದಲ್ಲಿ ಚಾಲಕ ಕಾರಿನೊಳಗೆ ಸಿಲುಕಿಕೊಂಡಿದ್ದು, ಕೂಡಲೇ ಸ್ಥಳೀಯರು ಧಾವಿಸಿ ಚಾಲಕನನ್ನು ಹೊರಗೆ ತೆಗೆದಿದ್ದಾರೆ. ಅಪಘಾತ ನಡೆದ ಸಂದರ್ಭ ಪಕ್ಷದ ಕೆಲಸ ನಿಮಿತ್ತ ಅದೇ ರಸ್ತೆಯಲ್ಲಿ ವಾಹನದಲ್ಲಿ ಹೋಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕೂಡಲೇ ಕಾರಿನಿಂದ ಇಳಿದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.

Edited By :
Kshetra Samachara

Kshetra Samachara

04/12/2020 05:38 pm

Cinque Terre

44.24 K

Cinque Terre

1

ಸಂಬಂಧಿತ ಸುದ್ದಿ