ಮುಲ್ಕಿ: ರಾ.ಹೆ. 66 ಪಡುಪಣಂಬೂರು ಬಳಿ ಕಂಟೈನರ್ ಚರಂಡಿಯಲ್ಲಿ ಹೂತು ಹೋಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಬೈಕಂಪಾಡಿಯಿಂದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿಯ ಗೋಡೌನ್ ನಲ್ಲಿ ಸರಕು ಲೋಡ್ ಮಾಡಲು ಹೆದ್ದಾರಿಯಿಂದ ಒಳಗಡೆ ಕಂಟೈನರ್ ಹೋಗಲು ಯತ್ನಿಸಿದಾಗ ಇಕ್ಕಟ್ಟಾದ ರಸ್ತೆಯಲ್ಲಿ ಚಕ್ರ ಹೂತುಹೋಗಿವೆ. ಈ ಸಂದರ್ಭ ಕಂಟೈನರ್ ಹಿಂಭಾಗ ರಸ್ತೆಗೆ ತಾಗಿ ಜಖಂಗೊಂಡಿದೆ. ಕಂಟೈನರ್ ಹೂತುಹೋದ ಪರಿಣಾಮ ಅರ್ಧಭಾಗ ಹೆದ್ದಾರಿಯಲ್ಲಿ ಉಳಿದಿದೆ.
ಇದರಿಂದಾಗಿ ಮಂಗಳೂರಿನಿಂದ ಉಡುಪಿ ಕಡೆಗೆ ಹೆದ್ದಾರಿ ಸಂಚಾರ ಭಾಗಶಃ ಅಸ್ತವ್ಯಸ್ತಗೊಂಡಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಬೃಹತ್ ಕಂಟೈನರ್ ಚಲಿಸಲು ಯತ್ನಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಬಳಿಕ ಕ್ರೇನ್ ಮೂಲಕ ತೆರವು ಗೊಳಿಸಲಾಯಿತು. ಕಳೆದ ಕೆಲ ತಿಂಗಳಿಂದ ಪಡುಪಣಂಬೂರು ರಾ.ಹೆ. ಪೆಟ್ರೋಲ್ ಬಂಕ್ ಬಳಿ ಸರ್ವಿಸ್ ರಸ್ತೆ ಇಲ್ಲದೆ ಅನೇಕ ಅಪಘಾತಗಳು ಸಂಭವಿಸಿದ್ದು, ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
25/11/2020 03:59 pm