ಬೈಂದೂರು: ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವಿಕೆಯ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮವನ್ನು ಬೈಂದೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮಿ ಉದ್ಘಾಟಿಸಿದರು.ಕಾರ್ಯಕ್ರನದಲ್ಲಿ 40 ಮಂದಿ ಗರ್ಭಿಣಿಯರಿಗೆ ಆರತಿ ಬೆಳಗಿಸಿ ಉಡಿ ತುಂಬಿಸಲಾಯಿತು. ಅತಿಥಿಗಳಾಗಿ ಸಮುದಾಯ ಅರೋಗ್ಯ ಕೇಂದ್ರ ಬೈಂದೂರು ಮಕ್ಕಳ ತಜ್ಞೆ ಡಾ. ನಂದಿನಿ, ಮಹಿಳಾ ತಜ್ಞ ಡಾ. ರಾಜೇಶ್ ಸೌಕೂರ್,ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಭಾರತಿ, ಇನ್ನರ್ ವೀಲ್ ಅಧ್ಯಕ್ಷೆ ಶಾಂತಿ ಪಿರೇರಾ,ಜಿಲ್ಲಾ ಕ್ಷಯ ರೋಗ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ ಉಪಸ್ಥಿತರಿದ್ದರು.ಸಮುದಾಯ ಅರೋಗ್ಯ ಕೇಂದ್ರ ಬೈಂದೂರ್ ಇದರ ಆಪ್ತ ಸಮಾಲೋಚಕಿ ವಸಂತಿ ಸ್ವಾಗತಿಸಿದರು. ಡಾ.ಚಿದಾನಂದ ಪ್ರಾಸ್ತವಿಕ ಮಾತನಾಡಿ, ಜಿಲ್ಲಾ ಅರೋಗ್ಯ ಮತ್ತು ಉಪಶಿಕ್ಷಣ ಅಧಿಕಾರಿ ಚಂದ್ರಕಲಾ ಧನ್ಯವಾದ ಸಮರ್ಪಿಸಿದರು.
Kshetra Samachara
10/03/2022 08:01 pm