ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ.ನವೀನ್ ಭಟ್ ವೈ. ವರ್ಗಾವಣೆಗೊಂಡಿದ್ದು ,ಅವರ ಸ್ಥಾನಕ್ಕೆ ಪ್ರಸನ್ನ ಎಚ್. ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
2020ರ ಅ.5ರಂದು ಉಡುಪಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ 2017ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ 30ರ ಹರೆಯದ ನವೀನ್ ಭಟ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ನಿರ್ದೇಶಕರಾಗಿ ನಿಯುಕ್ತಿಗೊಳಿಸಲಾಗಿದೆ.
ಡಾ.ನವೀನ್ ಭಟ್ ಅವರ ಸ್ಥಾನಕ್ಕೆ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಡೆಪ್ಯುಟಿ ರೆಸಿಡೆಂಟ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಎಚ್. ಅವರನ್ನು ನಿಯುಕ್ತಿಗೊಳಿಸಲಾಗಿದೆ. 2008ರ ಕೆಎಎಸ್ ಅಧಿಕಾರಿ ಯಾಗಿರುವ ಪ್ರಸನ್ನ ಎಚ್. ಅವರು 2017ರಲ್ಲಿ ಐಎಎಸ್ ಆಗಿ ಭಡ್ತಿ ಹೊಂದಿದ್ದರು.
ಚಿಕ್ಕಮಗಳೂರು ಜಿಲ್ಲೆ ಕಬ್ಬಿಗನಹಳ್ಳಿಯವರಾದ ಪ್ರಸನ್ನ ಎಚ್. ಅವರು ಪುತ್ತೂರು ಹಾಗೂ ಬೀದರ್ ಜಿಲ್ಲೆ ಬಸವಕಲ್ಯಾಣದ ಉಪ ವಿಭಾಗಾಧಿಕಾರಿಯಾಗಿ, ಕೊಡಗಿನ ಎಡಿಸಿಯಾಗಿ ಹಾಗೂ ಮಂಗಳೂರು ಎಂಸಿಸಿಯ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.
Kshetra Samachara
05/05/2022 08:04 pm