ಕುಟುಂಬಸ್ಥರು ನೀಡಿದ ದೂರಿನ ಪ್ರಕಾರ ಕೆ.ಎಸ್ ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದೇವೆ ಎಂದು ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಮಾಧ್ಯಮಗಳಿಗೆ ಇವತ್ತು ಪ್ರತಿಕ್ರಿಯೆ ನೀಡಿದ್ದಾರೆ.
ಶಾಂಭವಿ ಲಾಡ್ಜ್ ಮುಂಭಾಗ ಮಾತನಾಡಿದ ಐಜಿಪಿ,ಪಂಚನಾಮೆ ಪ್ರಕ್ರಿಯೆ ಆರಂಭವಾಗಿದೆ. ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡ್ತಾ ಇದ್ದೇವೆ.ಡಿಜಿಟಲ್ ಮತ್ತು ಸಾಂದರ್ಭಿಕ ಸ್ಥಳದಲ್ಲಿ ಇರುವಂತಹ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೋರೆನ್ಸಿಕ್ ತಜ್ಞರು ಇದ್ದಾರೆ ಎಂದರು.
ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು, ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಇನ್ನು 3 ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ನಾವು ಎಲ್ಲ ರೀತಿಯ ಸೂಕ್ತ ತನಿಖೆಗಳನ್ನು ಮಾಡುತ್ತೇವೆ. ಸಂತೋಷ್ ಕುಟುಂಬಸ್ಥರು ಬಹಳ ನೊಂದಿದ್ದಾರೆ ಬೇಸರದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.
PublicNext
13/04/2022 11:57 am