ಉಡುಪಿ: ಉತ್ತರಪ್ರದೇಶದ ಮಥುರಾ ಸಮೀಪ ಬರ್ಸಾನಾದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಗೋವಿಂದ ಧಾಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು .
ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವಿಶೇಷ ಪ್ರೇರಣೆಯಿಂದ ಆ ಪ್ರದೇಶದಲ್ಲಿ ಶ್ರೀ ಮಧ್ವಾಚಾರ್ಯರ ಸಂದೇಶ ಪ್ರಸಾರಕಾರ್ಯದಲ್ಲಿ ನಿರತರಾಗಿರುವ ತಿಜಾರಾದ ಪ್ರೇಮಪೀಠದ ಆಚಾರ್ಯ ಶ್ರೀ ಲಲಿತ್ ಮೋಹನ್ ಅವರ ನೇತೃತ್ವದಲ್ಲಿ ಈ ನೂತನ ಆಶ್ರಮವು ನಿರ್ಮಾಣಗೊಳ್ಳಲಿದೆ .
Kshetra Samachara
11/10/2022 04:51 pm