ಉಡುಪಿ: ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಉಡುಪಿ ಅಂಚೆ ವಿಭಾಗವು ದಾನಗಳಲ್ಲೇ ಶ್ರೇಷ್ಠ ದಾನ ರಕ್ತದಾನದ ಶಿಬಿರವನ್ನು ಆಯೋಜಿಸಿದ್ದು ಅಂಚೆ ಇಲಾಖಾ ಉದ್ಯೋಗಿಗಳು ತಮ್ಮ ನಿತ್ಯದ ಕರ್ತವ್ಯದೊಂದಿಗೆ ರಕ್ತದಾನ ಮಾಡಿದ್ದು ವಿಶೇಷ ಸಾಧನೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಅಂಚೆ ಇಲಾಖೆಯ ವತಿಯಿಂದ ಆಯೋಜಿಸಿರುವ ಪ್ರಪ್ರಥಮ ಶಿಬಿರ ಇದಾಗಿದೆ. ಸರಕಾರಿ ಕಚೇರಿಗಳಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುವುದು ಶ್ಲಾಘನೀಯ ಎಂದು ಜಿಲ್ಲಾ ಆಸ್ಪತ್ರೆ ಉಡುಪಿ ಇದರ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಅಭಿಪ್ರಾಯ ಭಟ್ಟರು.
ಅವರು ಉಡುಪಿ ಅಂಚೆ ಕಚೇರಿಯಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಾ, ಇಂತಹ ಶಿಬಿರಗಳು ಸರಕಾರಿ ಕಚೇರಿಗಳಲ್ಲಿ ವರ್ಷಕ್ಕೊಮ್ಮೆಯಾದರೂ ನಡೆದಲ್ಲಿ ರಕ್ತ ಸಂಗ್ರಹಣೆಯೊಂದಿಗೆ ರಕ್ತದಾನಿಗಳ ಆರೋಗ್ಯಕ್ಕೂ ಪೂರಕವಾಗುತ್ತದೆ ಎಂದರು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್ ವಂದಿಸಿದರು.ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರು ಪ್ರಸಾದ್ ಉಪಸ್ಥಿತರಿದ್ದರು. ಸುಮಾರು ನಲ್ವತ್ತಕ್ಕೂ ಅಧಿಕ ಸಿಬ್ಬಂದಿಗಳು ರಕ್ತದಾನ ಮಾಡಿದರು.
Kshetra Samachara
24/09/2022 01:49 pm