ಉಡುಪಿ: ಅತ್ಯಂತ ವೈಭವದಿಂದ ಸಮಗ್ರ ಜೀರ್ಣೋದ್ಧಾರ ಗೊಂಡ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಮಾಜಿಕ ಪರಿಕಲ್ಪನೆಯ ಕೊಡೆಯನ್ನು ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿಯ 186 ಮಕ್ಕಳಿಗೆ ಮತ್ತು ಆಧ್ಯಾಪಕರಿಗೆ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಡಿಯಾಳಿ ಎಜುಕೇಶನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ರತ್ನ ಕುಮಾರ್, ಕಡಿಯಾಳಿ ಶಾಲಾ ಮಾಜಿ ಮುಖ್ಯೋಪಾಧ್ಯಾಯರಾದ ಪಿ ಕೆ ಸದಾನಂದ ಶರ್ಮ, ಶಾಲಾ ನಿವೃತ್ತ ಅಧ್ಯಾಪಕರಾದ ಲಕ್ಷ್ಮೀನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ನಾಯ್ಕ, ಉಪಸ್ಥಿತರಿದ್ದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ
ನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಸ್ವಾಗತಿಸಿ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಮಂಜುನಾಥ್ ಹೆಬ್ಬಾರ್ ಧನ್ಯವಾದವಿತ್ತರು ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಸಂಧ್ಯಾ ಪ್ರಭು, ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಮುರಳಿ ಕೃಷ್ಣ ಉಪಾಧ್ಯ, ಸಂದೀಪ್ ಸನಿಲ್, ಚೇತನ್ ಕುಮಾರ್ ದೇವಾಡಿಗ ಕಡಿಯಾಳಿ, ಗಣೇಶ್ ಆಚಾರ್ಯ ಕಡಿಯಾಳಿ, ಸಂತೋಷ್ ಕಿಣಿ , ವಿದ್ಯಾ ಶಾಮ್ ಸುಂದರ್,ಶಾಲಾ ನಿವೃತ್ತ ಅಧ್ಯಾಪಕಿ ಕಮಲಾಕ್ಷಿ ಉಪಾಧ್ಯಾಯ, ಮತ್ತು ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು.
Kshetra Samachara
16/07/2022 02:24 pm