ಉಡುಪಿ: ಮೈಸೂರು ಅರಮನೆ ಎದುರು ಜೂ. 21ರಂದು ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಉಡುಪಿಯ ಶಿವಾನಿ ಶೆಟ್ಟಿ ಮತ್ತು ಕಾರ್ಕಳದ ಅನ್ವಿ ಎಚ್. ಅಂಚನ್ ಆಯ್ಕೆಯಾಗಿದ್ದಾರೆ.
ಉಡುಪಿ ವಿದ್ಯೋದಯ ಶಾಲೆಯ 5ನೇ ತರಗತಿಯ ಶಿವಾನಿ ಅವರು ಶಿವಾನಂದ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ದಂಪತಿಯ ಪುತ್ರಿ. ಕಾರ್ಕಳದ ರವಿಶಂಕರ ವಿದ್ಯಾ ಮಂದಿರದ 7ನೇ ತರಗತಿಯ ಅನ್ವಿ ಅವರು ಹರೀಶ ಮತ್ತು ಶೋಭಾ ದಂಪತಿಯ ಪುತ್ರಿ.
ಈಗಾಗಲೇ ನಡೆದ ಪೂರ್ವಭಾವಿ ಪ್ರದರ್ಶನ ತಯಾರಿಯಲ್ಲಿ ಇವರು ಭಾಗವಹಿಸಿದ್ದಾರೆ. ಪಾಲ್ಗೊಳ್ಳುವವರ ಪೈಕಿ ಅತಿ ಚಿಕ್ಕ ವಯಸ್ಸಿನವಳಾದ ಶಿವಾನಿ ಶೆಟ್ಟಿ ಅವರಿಗೆ ಕೋವಿಡ್ ಲಸಿಕೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ತಡೆ ಹಿಡಿಯಲಾಗಿತ್ತು. ಆದರೆ ಶುಕ್ರವಾರ ಅಧಿಕೃತ ಮಾಹಿತಿ ಬಂದಿದ್ದು 72 ಗಂಟೆಗಳ ಪೂರ್ವದ ಕೋವಿಡ್ ನೆಗೆಟಿವ್ ವರದಿಯ ಆಧಾರದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.
Kshetra Samachara
20/06/2022 08:29 am