ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮನೆಮನೆ ಭಜನೆ: ಭಜನಾ ಕ್ರಾಂತಿಗೆ ಮುನ್ನುಡಿ

ಉಡುಪಿ: ಸಮಗ್ರ ಜೀರ್ಣೋದ್ದಾರಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ -ಗ್ರಾಮ ಭಜನೆ’ ನಡೆಯುತ್ತಿದೆ.

ಕಾರ್ಯಕ್ರಮದ ಪ್ರಯುಕ್ತ ಪ್ರತಿನಿತ್ಯ 60 ಮನೆಗಳಲ್ಲಿ ಭಜನೆ ನಡೆಯುತ್ತಿದೆ. ಪ್ರತಿ ಭಜನೆ ತಂಡದಲ್ಲಿ ತಲಾ 30 ರಿಂದ 40ರ ತನಕ ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ವಿಶೇಷ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಐದು ತಂಡ ನಿತ್ಯ 60 ಮನೆಗಳಿಗೆ ಹೋಗಿ ಭಜನೆ ನಡೆಸುತ್ತಿದೆ. ಏಪ್ರಿಲ್ ಎರಡರಿಂದ ಪ್ರಾರಂಭಗೊಂಡ ಈ ಗ್ರಾಮ ಭಜನೆ ಈ ತಿಂಗಳ 28 ರವರೆಗೆ ಮುಂದುವರೆಯಲಿದೆ. ಪ್ರತಿಯೊಂದು ಮನೆಯಲ್ಲಿ ದೀಪ ಹಚ್ಚಿ, ರಂಗವಲ್ಲಿ ಬಿಡಿಸಿ ಊದುಬತ್ತಿ ಹಚ್ಚಿ ಹೃದಯಾಂತರಾಳದಿಂದ ಸ್ವಾಾಗತಿಸಲಾಗುತ್ತಿದೆ.

Edited By : PublicNext Desk
Kshetra Samachara

Kshetra Samachara

15/04/2022 12:23 pm

Cinque Terre

4.83 K

Cinque Terre

0

ಸಂಬಂಧಿತ ಸುದ್ದಿ