ಉಡುಪಿ: ಉಡುಪಿಯ ನಿಟ್ಟೂರು ಸರಕಾರಿ ಶಾಲೆ ತನ್ನ ಸುವರ್ಣ ಪರ್ವ ಆಚರಿಸುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಗೆ ಹಳೆ ವಿದ್ಯಾರ್ಥಿಗಳು ತಮ್ಮ ಕೈಲಾದ ಸಹಾಯ ಮಾಡಿ, ಪ್ರೋತ್ಸಾಹ ನೀಡುತ್ತಿದ್ದಾರೆ.
ದುಬೈಯಲ್ಲಿ ಉದ್ಯೋಗಿಯಾಗಿರುವ ಶಾಲೆಯ ಹಳೆವಿದ್ಯಾರ್ಥಿ ರಾಜೇಶ್ ಕುಮಾರ್ (1988-89), ಶಾಲೆಗೆ ಆಗಮಿಸಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿ ಸುವರ್ಣ ಪರ್ವಕ್ಕೆ 1ಲಕ್ಷ ರೂ. ನೀಡಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ಹಳೆ ವಿದ್ಯಾರ್ಥಿಗಳಾದ ಪಿ. ದಿನೇಶ್ ಪೂಜಾರಿ, ಕೃಷ್ಣಮೂರ್ತಿ ಭಟ್, ಶಿಕ್ಷಕರಾದ ಅನಸೂಯ, ಶೃಂಗೇಶ್ವರ, ದೇವದಾಸ ಶೆಟ್ಟಿ, ಅಶೋಕ್ ಉಪಸ್ಥಿತರಿದ್ದು, ಹಳೆ ವಿದ್ಯಾರ್ಥಿಯ ಉದಾರ ದೇಣಿಗೆಗೆ ಅಭಿನಂದನೆ ಸಲ್ಲಿಸಿದರು.
Kshetra Samachara
25/09/2020 10:20 pm