ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಮೇ.28 ಮತ್ತು 29ರಂದು ಹಲಸು ಮೇಳ: ಸಾಧಕ ಕೃಷಿಕರಿಗೆ ಸನ್ಮಾನ

ವಿವಿಧ ಇಲಾಖೆಗಳ ಆಶ್ರಯದಲ್ಲಿ ಮೇ. 28 ಮತ್ತು 29ರಂದು ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಹಲಸಿನ ಮೇಳ-2022 ಹಮ್ಮಿಕೊಳ್ಳಲಾಗಿದೆ ಎಂದು ವಲಯ ಕೃಷಿ ತೋಟಗಾರಿಕೆ ಬ್ರಹ್ಮಾವರದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣರವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಹಲಸಿನ ಮೇಳವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ನೆರವೇರಿಸುವರು. ತಾಂತ್ರಿಕ ಕೈಪಿಡಿಯನ್ನು ಶಾಸಕ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸುವರು. ಇದೇ ವೇಳೆ ಕೃಷಿಯಲ್ಲಿ ಸಾಧನಗೈದ ರೈತರಿಗೆ ಸನ್ಮಾನ ಕೂಡ ನಡಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

Edited By :
Kshetra Samachara

Kshetra Samachara

26/05/2022 03:05 pm

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ