ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಟ್ಯ ನೂಪುರ 2020: ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಉಡುಪಿಯ ಅನುಷ್ಕಾ ಉಪಾಧ್ಯಗೆ ದ್ವಿತೀಯ ಬಹುಮಾನ

ಉಡುಪಿ: ರಂಗಮಯೂರಿ ಕಲಾಶಾಲೆ ಸುಳ್ಯ ಮತ್ತು ವಿಶ್ವ ಕಲಾನಿಕೇತನ ಆರ್ಟ್ಸ್ ಆ್ಯಂಡ್ ಕಲ್ಚರ್ ಪುತ್ತೂರು ಇವರು ಪ್ರಾಯೋಜಿಸಿದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ ನಾಟ್ಯ ನೂಪುರ- 2020 ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಉಡುಪಿಯ ಅನುಷ್ಕಾ ಉಪಾಧ್ಯ ದ್ವಿತೀಯ ಬಹುಮಾನ ಗಳಿಸಿದ್ದಾರೆ.

ಉಡುಪಿಯ ಖ್ಯಾತ ಭರತನಾಟ್ಯ ಕಲಾವಿದೆ ಅಂಜನಾ ಉಪಾಧ್ಯ ಮತ್ತು ಸುಧಾಕರ್ ಉಪಾಧ್ಯ ದಂಪತಿ ಪುತ್ರಿ ಈಕೆ. ಕೊರೊನಾ ಸಮಯದಲ್ಲೂ ನಿರೀಕ್ಷೆಗೂ ಮೀರಿ ರಾಜ್ಯದ ಮೂಲೆ ಮೂಲೆಗಳಿಂದ ಅದ್ಭುತ ಪ್ರತಿಭೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮನೆಯಿಂದಲೇ ಭರತ ನಾಟ್ಯದ ವೀಡಿಯೋ ಮಾಡಿ ಕಳಿಸಲು ಪೋಷಕರಲ್ಲಿ ಮನವಿ ಮಾಡಲಾಗಿತ್ತು. ಅದರಂತೆ ಅನುಷ್ಕಾ ಉಪಾಧ್ಯ ತನ್ನ ಭರತನಾಟ್ಯದ ವೀಡಿಯೋ ಕಳಿಸಿದ್ದು,ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸುವ ಮೂಲಕ ಉಡುಪಿಗೆ ಹೆಮ್ಮೆ ತಂದಿದ್ದಾರೆ.

Edited By : Vijay Kumar
Kshetra Samachara

Kshetra Samachara

01/10/2020 11:05 pm

Cinque Terre

4.91 K

Cinque Terre

0

ಸಂಬಂಧಿತ ಸುದ್ದಿ