ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೋವಿಡ್ 19ನಿಂದಾಗಿ ಭಕ್ತರಿಗೆ ಮಾರ್ಚ್ 22ರಿಂದ-ಸೆಪ್ಟೆಂಬರ್ 27ರ ವರೆಗೆ ದೇವರ ದರ್ಶನದ ವ್ಯವಸ್ಥೆ ಕನಕನ ಕಿಂಡಿಯಲ್ಲಿ ಮಾಡಲಾಗಿತ್ತು.
ನಂತರ ಪರ್ಯಾಯ ಪೀಠಾಧಿಪತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸೆಪ್ಟೆಂಬರ್ 28 ರಿಂದ ಮಧ್ಯಾಹ್ನ 2.00ರಿಂದ ಸಂಜೆ 5.00 ಗಂಟೆಯವರೆಗೆ ಶ್ರೀಕೃಷ್ಣನ ದರ್ಶನದ ವ್ಯವಸ್ಥೆಯನ್ನು ಭಕ್ತರಿಗೆ ಶ್ರೀಮಠದ ಒಳಭಾಗದಲ್ಲಿ ಅವಕಾಶ ಕಲ್ಪಿಸಿದ್ದರು.
ಇದೀಗ ಸ್ಥಳೀಯ ಹಾಗೂ ಪರವೂರ ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನದ ಸಮಯದಲ್ಲಿ ಇನ್ನೂ ಬದಲಾವಣೆ ಮಾಡಲಾಗಿದೆ.
ಅದರಂತೆ ನವೆಂಬರ್ 4ರಿಂದ ಬೆಳಿಗ್ಗೆ 8.30 ರಿಂದ ಬೆಳಿಗ್ಗೆ 10.00 ರವರೆಗೆ ಹಾಗೂ ಈ ಹಿಂದಿನಂತೆ ಮಧ್ಯಾಹ್ನದ ಸಮಯವನ್ನು 2.00 ರಿಂದ ಸಂಜೆ 5.00ರ ಬದಲು 6:00 ಗಂಟೆವರೆಗೆ ವಿಸ್ತರಿಸಿ, ಭಕ್ತಾದಿಗಳಿಗೆ ಹೆಚ್ಚು ಅನುಕೂಲವಾಗುವಂತೆ ಶ್ರೀಕೃಷ್ಣನ ದರ್ಶನ ಭಾಗ್ಯ ಲಭಿಸುವ ಅವಕಾಶ ಪರ್ಯಾಯ ಶ್ರೀಪಾದರು ಕಲ್ಪಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.
Kshetra Samachara
02/11/2020 01:34 pm