ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಕ್ಕುಂಜೆ ವಾರ್ಡ್ ನಲ್ಲಿ ನೂರು ಶೇ.ಲಸಿಕೆ ಗುರಿ: ಬಾಲಕೃಷ್ಣ ಶೆಟ್ಟಿ

ಉಡುಪಿ: ನಗರದ ಕಕ್ಕುಂಜೆ ವಾರ್ಡ್ ನಲ್ಲಿ ಸಂಪೂರ್ಣ ನೂರು ಶೇ. ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.ಇದರ ಭಾಗವಾಗಿ ವಾರ್ಡ್ ನಲ್ಲಿ ಲಸಿಕೆ ನೀಡುವ ಅಭಿಯಾನ ನಡೆಸಲಾಗುತ್ತಿದೆ.ಈಗಾಗಲೇ ಸುಮಾರು 65% ಶೇಖಡ ಜನರಿಗೆ ಲಸಿಕೆ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ ,ಕಕ್ಕುಂಜೆಯನ್ನು ಸಂಪೂರ್ಣ ವ್ಯಾಕ್ಸಿನೇಷನ್‌ ಫ್ರೀ ವಾರ್ಡ್ ಮಾಡಬೇಕೆಂಬ ಉದ್ದೇಶದಿಂದ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿ ಜನರನ್ನು ಕರೆತಂದು ವ್ಯಾಕ್ಸಿನೇಷನ್‌ ಮಾಡಿಸಲಾಗುತ್ತದೆ. ಸದ್ಯದಲ್ಲಿಯೇ ವಾರ್ಡ್ ನ 100% ವಾಕ್ಸಿನ್ ಪ್ರೀ ವಾರ್ಡ್ ಆಗಿ ಘೋಷಣೆ ಮಾಡಲಾಗುತ್ತದೆ. ಮಾತ್ರವಲ್ಲ, ಕೋವಿಡ್ 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಯವಕರನ್ನು ಒಗ್ಗೂಡಿಸಿ ತಂಡಗಳನ್ನು ರಚಿಸಿ ತಯಾರಿ ನಡೆಸಲಾಗುತ್ತಿದೆ ಎಂದು ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ತಿಳಿಸಿದರು. ಸರಕಾರದ ಕೋವಿಡ್ ನಿಯಮಾವಳಿಗಳನ್ನು ಎಲ್ಲರೂ ಪಾಲಿಸಬೇಕು. ಕೋವಿಡ್ 3 ನೇ ಅಲೆಯನ್ನು ತಡೆಗಟ್ಟಲು ಎಲ್ಲಾ ಸಾರ್ವಜನಿಕರು ಜವಾಬ್ದಾರಿಯಿಂದ ಸಹಕರಿಸಬೇಕು ಎಂದು ವಿನಂತಿಸಿದರು.

Edited By : PublicNext Desk
Kshetra Samachara

Kshetra Samachara

25/08/2021 11:54 am

Cinque Terre

3.08 K

Cinque Terre

0