ತುಮಕೂರು: ಜಿಲ್ಲೆಗೆ ರಾಹುಲ್ ಗಾಂಧಿ ಬಂದು ಹೋದ ನಂತರ ಕಾಂಗ್ರೆಸ್ ಪಕ್ಷದ ಮತ್ತೊಂದು ವಿಕೇಟ್ ಪತನವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಂಸದರಾಗಿದ್ದ ಎಸ್ ಪಿ ಮುದ್ದಹನುಮೇಗೌಡ ಜಿಜೆಪಿ ಪಕ್ಷ ಸೇರುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ. ತುಮಕೂರಿನ ಗಂಗಾಧರಯ್ಯ ಸಮುದಾಯ ಭವನದಲ್ಲಿ ಮಾಜಿ ಶಾಸಕ ಬಿ ಸುರೇಶ್ ಗೌಡರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ಪಕ್ಷ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ.
ಬಿಜೆಪಿ ವರಿಷ್ಟರ ಜೊತೆ ಒಪ್ಪಂದ ಆಗಿದೆ, ನಾನು ಅತೀ ಶೀಘ್ರದಲ್ಲಿ ಬಿಜೆಪಿ ಸೇರುತ್ತಿದ್ದೇನೆ ಎಂದು ಬಹಿರಂಗ ವೇದಿಕೆಯಲ್ಲಿ ಘೋಷಿಸಿದ್ದಾರೆ. ನಾನು ಕೂಡ ಸುರೇಶ್ ಗೌಡರ ಗೆಲುವಿಗೆ ಕೈಲಾದ ಅಳಿಲು ಸೇವೆ ಸಲ್ಲಿಸುತ್ತೇನೆ, ಅವರ ಗೆಲುವು ತುಮಕೂರು ಜಿಲ್ಲೆಗೆ ಅನಿವಾರ್ಯತೆ ಇದೆ, ಸಕ್ರೀಯ ರಾಜಕಾರಣಿ ಗೆಲ್ಲಿಸದೇ ಹೋದರೆ ಅದರ ನಷ್ಟ ಜಿಲ್ಲೆಗಾಗುತ್ತದೆ, ಆಕಾರಣದಿಂದ ಸುರೇಶ್ ಗೌಡರ ಗೆಲುವು ಜಿಲ್ಲೆಗೆ ಬೇಕು ಎಂದಿದ್ದಾರೆ.
PublicNext
11/10/2022 10:34 am