ಕೊರಟಗೆರೆ: ಪಟ್ಟಣದ ಹೊರವಲಯದಲ್ಲಿ ಪ್ರವಾಸಿ ಮಂದಿರದ ಬಳಿ ಕೊರಟಗೆರೆ ಕ್ಷೇತ್ರದಲ್ಲಿ ಸಾರ್ವಜನಿಕರ ದಲಿತರ, ಹಿಂದುಳಿದ ವರ್ಗದ ಬಡಜನತೆ, ಕೂಲಿ ಕಾರ್ಮಿಕರ, ಅಭಿವೃದ್ಧಿ ಮೂಲಸೌಕರ್ಯ ಇನ್ನೂ ಅನೇಕ ಹಕ್ಕುಗಳ ಸಮಸ್ಯೆಗಳ ಬಗ್ಗೆ ಪಟ್ಟಣ ಸಭೆ ಹಮ್ಮಿಕೊಳ್ಳಲಾಗಿತ್ತು. ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಯಾಜ್ ಅಹ್ಮದ್ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೊರಟಗೆರೆ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬಡ ಜನಾಂಗ, ಕೂಲಿ ಕಾರ್ಮಿಕರು, ಬಡ ರೈತರು, ಸಣ್ಣಪುಟ್ಟ ವ್ಯಾಪಾರಸ್ಥರು ವಾಸವಾಗಿದ್ದಾರೆ. ಕಳೆದ 2 ವರ್ಷದಿಂದ ಹೆಮ್ಮಾರಿ ಕೊರೊನಾದಿಂದ ಬಡ ಕುಟುಂಬಗಳು ತತ್ತರಿಸಿ ಜನತೆಗೆ ಯಾವುದೇ ಉದ್ಯೋಗವಕಾಶ ಕಲ್ಪಿಸುವಂತಹ ಯೋಜನೆಗಳು ಕ್ಷೇತ್ರದಲ್ಲಿ ಅನುಷ್ಠಾನಗೊಂಡಿಲ್ಲ. ಅದೇ ರೀತಿ ಸಾಮಾನ್ಯ ಮಧ್ಯಮ ವರ್ಗದ ಜನರ ವರ್ಗದವರ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ ಎಂದು ಹೇಳಿದರು.
ಕೊರಟಗೆರೆ ಪಟ್ಟಣದ ಕಳೆದ ಬಾರಿ 2018 ಪಟ್ಟಣ ಪಂಚಾಯಿತಿ ಚುನಾವಣೆಯ ವಾರ್ಡ್ ಮೀಸಲಾತಿಯಲ್ಲಿ ಉದ್ದೇಶ ಪೂರ್ವಕವಾಗಿ ದುರುದ್ದೇಶ ಮಾಡಲಾಗಿದ್ದು, ಸಂವಿಧಾನದ ಅಡಿಯಲ್ಲಿ ಆಯಾ ವಾರ್ಡ್‌ಗಳಲ್ಲಿ ಸಮುದಾಯದ ಜನ ಸಂಖ್ಯೆ ಆಧಾರದಲ್ಲಿ ವಾರ್ಡ್‌ಗಳ ಮೀಸಲಾತಿ ನಿಗದಿಯಾಗಬೇಕು. ಆದರೆ ಇದಕ್ಕೆ ವಿರುದ್ಧವಾಗಿ ಮೀಸಲಾತಿ ಮಾಡಿರುವುದು ಸಮುದಾಯದ ಜನರಿಗೆ ಮಾಡಿರುವಂತಹ ಅನ್ಯಾಯ ಎಂದು ಗುಡುಗಿದರು.
ಕ್ಷೇತ್ರದಲ್ಲಿ ಅನುದಾನಗಳು ಮರೀಚಿಕೆಯಾಗಿದ್ದು, ಅಭಿವೃದ್ಧಿ, ಸರ್ಕಾರಿ ಸವಲತ್ತುಗಳು, ಮೂಲಸೌಕರ್ಯದಿಂದ ದಲಿತ ಸಮುದಾಯದ ಜನರಿಗೆ ವಂಚನೆ ಮತ್ತು ದಲಿತ ಸುಮುದಾಯದ ಜನಾಂಗಕ್ಕೆ ಅನ್ಯಾಯ ಸೇರಿದಂತೆ ಹಲವು ವಿಚಾರಗಳನ್ನು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ವಾಸಿಂ ಅಕ್ರಂ,ಸುರೇಶ್ ಬಾಬು, ಮೊಹಮ್ಮದ್ ನೂರಾರು ಯುವಕರು, ಸ್ಥಳೀಯರು ಇದ್ದರು.
PublicNext
30/09/2022 10:28 am