ತುಮಕೂರು: ವಿಧಾನ ಸಭಾ ಚುನಾವಣೆ ಸಮೀಪಿಸುವಾಗಲೇ ತುಮಕೂರಿನಲ್ಲಿ ಚುನಾವಣಾ ಅಖಾಡ ರಂಗೇರುತ್ತಿದ್ದು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ದೇವರ ಮೊರೆಹೋಗುತ್ತಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ 2023ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಲಿ ಎಂದು ಆಯುಧ ಪೂಜೆ ಹಬ್ಬ ದಂದು ಅಭಿಮಾನಿಯೊಬ್ಬ ಬೂದಗುಂಬಳ ಕಾಯಿಮೇಲೆ ಹರಕೆ ಬರೆದು ದೇವರಿಗೆ ಈಡುಗಾಯಿ ಹೊಡೆದಿದ್ದಾರೆ. ಸೊಗಡು ಶಿವಣ್ಣ ಅಭಿಮಾನಿ ಕ್ಯಾತ್ಸಂದ್ರ ಗಣೇಶ್ ಎಂಬಾತ ಸೊಗಡು ಶಿವಣ್ಣ ಶಾಸಕರಾಗಲು ಪ್ರಾರ್ಥಿಸಿ ಬೂದಗುಂಬಳ ಹೊಡೆದಿದ್ದಾರೆ.
PublicNext
04/10/2022 04:44 pm