ತುಮಕೂರು : 300 ಗ್ರಾಂ ಚಿನ್ನಾಭರಣಗಳಿದ್ದ ಸೂಟ್ ಕೇಸ್ ಮರಳಿ ವಾರಸುದಾರರಿಗೆ ನೀಡಿ ತುಮಕೂರಿನ ನ್ಯಾಯಾಲಯದ ಸಿಬ್ಬಂದಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ತುಮಕೂರು ನ್ಯಾಯಾಲಯದಲ್ಲಿ ಎಫ್ ಡಿ ಎ ಆಗಿ ಕೆಲಸ ಮಾಡುತ್ತಿರುವ ಶಿವರಾಜ್ ಪ್ರಾಮಾಣಿಕತೆ ಮೆರೆದ ವ್ಯಕ್ತಿಯಾಗಿದ್ದಾರೆ. ಇವರಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಲಿಫ್ಟ್ ನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಇಡೀ ರೈಲು ತುಂಬಾ ಬ್ಯಾಗ್ ಹಿಡಿದು ಕೇಳಿದ್ರೂ ಯಾರು ಬ್ಯಾಗ್ ಪಡೆದಿರಲಿಲ್ಲ. ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಗುರುರಾಜ್ ತುಮಕೂರಿಗೆ ಬಂದಿದ್ದರು.
ಶಿವಮೊಗ್ಗದ ವಿನೋಭಾನಗರದ ಅರ್ಪಿತಾ ಕುಟುಂಬ ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಕಳೆದುಕೊಂಡಿತ್ತು. ಇಡೀ ಕುಟುಂಬದ ಸದಸ್ಯರು ಬ್ಯಾಗ್ ನಾಪತ್ತೆಯಾದ್ದರಿಂದ ಕಂಗಾಲಾಗಿದ್ದರು. ಚಿಂತಾಮಣಿಗೆ ಸಂಬಂಧಿಕರ ಮದುವೆ ಹೊರಟಿದ್ದ ಅರ್ಪಿತಾ ಕುಟುಂಬ ಬ್ಯಾಗ್ ನಲ್ಲಿ 300 ಗ್ರಾಂ ಚಿನ್ನದ ಒಡವೆ ಇಟ್ಟಿದ್ದರು. ಈ ಬಗ್ಗೆ ಪೊಲೀಸರಿಗೆ ಕೂಡ ದೂರು ನೀಡಲು ಹೋಗಿದ್ದರು. ಕೊನೆಗೆ ಮಾಹಿತಿ ತಿಳಿದು ರೈಲ್ವೆ ಪೊಲೀಸರ ಜೊತೆ ಬಂದ ಅರ್ಪಿತಾ ದಂಪತಿ, ಗುರುರಾಜ್ ಕಾಲಿಗೆ ನಮಸ್ಕರಿಸಿ ತಮ್ಮ ವಸ್ತುಗಳನ್ನು ಮರಳಿ ಪಡೆದಿದ್ದಾರೆ.
PublicNext
11/10/2022 04:32 pm