ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಆಂಬ್ಯುಲೆನ್ಸ್ ಸಿಗದೇ ಮಹಿಳೆ ಸಾವು: ಅಧಿಕಾರಿಗಳ ವಿರುದ್ಧ ಆಕ್ರೋಶ

ತುಮಕೂರು : ಸಕಾಲಕ್ಕೆ ಆಂಬ್ಯುಲೆನ್ಸ್​ ಸಿಗದೇ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರಿನ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.

ಐಡಿಹಳ್ಳಿಯ 65 ವರ್ಷದ ಜಯಮ್ಮ ಅನಾರೋಗ್ಯಕ್ಕೊಳಗಾಗಿದ್ರು. ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಕರಿಂದ 108ಕ್ಕೆ ಕರೆ ಮಾಡಿದ್ದಾರೆ. ಕರೆ ಮಾಡಿ 1 ಗಂಟೆಯಾದ್ರೂ ಆಂಬ್ಯುಲೆನ್ಸ್ ಬಂದಿಲ್ಲ. ಆನಂತರ ಸಂಬಂಧಿಕರು THOಗೆ ಕರೆ ಮಾಡಿದ್ದಾರೆ.

ಟಿಹೆಚ್​ಓಗೆ ಕರೆ ಮಾಡಿದ ನಂತರ ಆಂಬ್ಯುಲೆನ್ಸ್ ಬಂದಿದೆ. ಅಷ್ಟೊತ್ತಿಗಾಗಲೇ ಐಡಿಹಳ್ಳಿಯ ಜಯಮ್ಮ ಜೀವ ಬಿಟ್ಟಿದ್ದಾಳೆ. ಸಕಾಲದಲ್ಲಿ ಆಂಬ್ಯುಲೆನ್ಸ್ ಸಿಕ್ಕಿದ್ರೆ ಜಯಮ್ಮ ಬದುಕ್ತಿದ್ರು ಎಂದು ಆಕ್ರೋಶ ಹೊರಹಾಕುತ್ತಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Edited By : Shivu K
Kshetra Samachara

Kshetra Samachara

25/09/2022 06:26 pm

Cinque Terre

1.98 K

Cinque Terre

0