ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಸರ್ಕಾರದ ನೀತಿ ವಿರುದ್ಧ ರೈತರ ಪ್ರತಿಭಟನೆ

ತುಮಕೂರು: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿ ರೈತರ ಕೊಳವೆಬಾವಿಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಮೂಲಕ ರೈತರ ಜೀವನಕ್ಕೆ ಕೊಳ್ಳಿ ಇಡಲು ಸರಕಾರ ಮುಂದಾಗಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಕಿಡಿಕಾರಿದರು.

ಗುಬ್ಬಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನಾ ಮೆರವಣಿಗೆ ಮಂಗಳವಾರ ಮಾಡಿಕೊಂಡು ಬೆಸ್ಕಾಂ ಕಚೇರಿಗೆ ಆಗಮಿಸಿ ಪ್ರತಿಭಟಿಸಿ ಮಾತನಾಡಿ ಸಂಕ ಷ್ಟದಲ್ಲಿ ಬದುಕು ಸಾಗಿಸುತ್ತಿ ರುವ ರೈತರಿಗೆ ವಿದ್ಯುತ್ ಕ್ಷೇತ್ರದಿಂದ ಮತ್ತಷ್ಟು ಆಘಾತ ಸೃಷ್ಟಿಸಲು ಸರ್ಕಾರ ಮುಂದಾ ಗಿದೆ ಖಾಸಗೀಕರಣ ಮಾಡಿ ಪಂಪ್ಸೆಟ್ ಗಳಿಗೆ ಮೀಟರ್ ಅಳವಡಿಸುತ್ತಿರುವುದು ದುರದೃಷ್ಟಕರ.

ಈ ದೇಶದ ಅನ್ನದಾತ ರೈತನ ಇಲ್ಲದಿದ್ದರೆ ಯಾವುದೂ ನಡೆ ಯುವುದಿಲ್ಲ ರೈತರ ಏಳಿಗೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬರುವ ಸರ್ಕಾರ ಗಳು ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಮೀಟರ್ ಅಳವಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದ್ದರು ರಾಜ್ಯ ಸರ್ಕಾರ ಮುಂದಾಗಿ ರುವುದನ್ನು ವಿರೋಧಿಸಿದ ಅವರು ಮೀಟರ್ ಅಳವಡಿ ಸುವುದರಿಂದ ರಾಜ್ಯದ ಸುಮಾರು45 ಲಕ್ಷ ಪಂಪ್ಸೆಟ್ ಗಳಿಗೆ ಸಮಸ್ಯೆಯಾಗುತ್ತದೆ ಇನ್ನೂ ರಾಜ್ಯದಲ್ಲಿ ಲಕ್ಷಾಂತರ ರೈತರು ಅಡಿಕೆ ಬೆಳೆಯುತ್ತಿದ್ದು ಇಲ್ಲಿನ ಅಡಿಕೆ ಹೆಚ್ಚಿನ ಬೆಂಬಲ ಬೆಲೆಯನ್ನು ಕೊಡದ ಸರ್ಕಾರ ಅದನ್ನು ವಿದೇಶದಿಂದ ಆಮ ದು ಮಾಡಿಕೊಳ್ಳುವುದಕ್ಕೆ ಮುಂದಾಗಿದೆ ಇದರಿಂದ ರಾಜ್ಯದ ಹಾಗೂ ದೇಶದಲ್ಲಿ ಅಡಿಕೆ ಬೆಳಗಾರರಿಗೆ ದೊಡ್ಡ ಹೊಡೆತ ಬೀಳಲಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಗೃಹ ಮಂತ್ರಿಗಳಿಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾರ್ಯ ದರ್ಶಿ ಲೋಕೇಶ್, ಸೇರಿದಂತೆ ನೂರಾರು ರೈತಸಂಘದ ಮುಖಂಡರು ಹಾಜರಿದ್ದರು.

Edited By : PublicNext Desk
PublicNext

PublicNext

12/10/2022 08:47 am

Cinque Terre

4.16 K

Cinque Terre

0