ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಅಪೌಷ್ಟಿಕತೆ ನಿರ್ಮೂಲನೆ ನಮ್ಮ ಗುರಿ; ಜಪಾನಂದ ಶ್ರೀ

ಮಧುಗಿರಿ : ದೇಶದಲ್ಲಿ 32 ಲಕ್ಷಕ್ಕೂ ಹೆಚ್ಚು ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಪಾವಗಡ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ಕಳವಳ ವ್ಯಕ್ತಪಡಿಸಿದರು.

ಮಧುಗಿರಿ ಪಟ್ಟಣದ ಕುಂಚಿಟಿಗ ಒಕ್ಕಲಿಗ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಪಾವಗಡ ಶ್ರೀ ರಾಮ ಕೃಷ್ಣ ಸೇವಾಶ್ರಮ ಇವರ ಸಹಯೋಗದೊಂದಿಗೆ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಮತ್ತು ಫ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅನ್ನಪೂರ್ಣ ಪೌಷ್ಠಿಕ ಆರೋಗ್ಯ ಮಿಕ್ಸ್ ವಿತರಿಸುವ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.

ಅಪೌಷ್ಠಿಕತೆಯಿಂದಾಗಿ ಬಹ ಳಷ್ಟು ಆರೋಗ್ಯದ ತೊಂದರೆ ಗಳು ಕಂಡುಬರಲಿದ್ದು, ಇಂದು ಬಹಳಷ್ಟು ಮಕ್ಕಳೂ ಸಹ ಅಪೌ ಷ್ಠಿಕತೆಯಿಂದ ನರಳುತ್ತಿದ್ದಾರೆ ಇದನ್ನು ಮನಗಂಡು ಸತ್ಯ ಸಾಯಿ ಸೇವಾ ಟ್ರಸ್ಟ್ ಮೂಲಕ ಶೈಕ್ಷಣಿಕ ಜಿಲ್ಲೆಯ ಮಧುಗಿರಿ, ಕೊರಟಗೆರೆ, ಶಿರಾ ಪಾವಗಡ ತಾಲೂಕಿನ 92677 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನ್ನಪೂರ್ಣ ಪೌಷ್ಠಿಕ ಆರೋಗ್ಯ ಮಿಕ್ಸ್ ನ್ನು ಶಾಲೆಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದೊಂದು ಉತ್ತಮ ಪೌಷ್ಟಿಕ ಆಹಾರವಾಗಿದೆ.

ಈ ಸಂಸ್ಥೆಯ ಮೂಲಕ ಈಗಾಗಲೇ ದೇಶದ 10 ಲಕ್ಷ ಮಕ್ಕಳಿಗೆ ಪೌಷ್ಟಿಕ ಆರೋಗ್ಯ ಮಿಕ್ಸ್ ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಎಲ್ಲ ಮಕ್ಕಳಿಗೂ ವಿತರಿಸುವ ಚಿಂತನೆ ನಡೆಸಿದ್ದು, ಅಧಿಕಾರಿ ಗಳು ಈ ಯೋಜನೆಯಲ್ಲಿ ಕೈ ಜೋಡಿಸುವ ಮೂಲಕ ಯಾವುದೇ ರೀತಿಯ ತೊಂದರೆ ಯುಂಟಾಗದಂತೆ ಮಕ್ಕಳಿಗೆ ವಿತರಿಸಲು ಕ್ರಮಕೈಗೊಳ್ಳಬೇಕು ಎಂದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾತನಾಡಿ ಮಕ್ಕಳ ಆರೋಗ್ಯವೇ ನಮ್ಮ ಗುರಿ ಎಂಬ ದ್ಯೇಯದೊಂದಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಆರೋಗ್ಯ ಮಿಕ್ಸ್ ವಿತರಿಸುತ್ತಿದ್ದು, ರಾಜ್ಯದ ಎಲ್ಲ ಮಕ್ಕಳಿಗೂ ಇದನ್ನು ವಿತರಿಸು ವಂತಾಗಲು, ಸರ್ಕಾರವೂ ಕೈ ಜೋಡಿಸಬೇಕು ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದು, ಈಗಾಗಲೇ 5 ಲಕ್ಷ ಮಕ್ಕಳಿಗೆ ಆರೋಗ್ಯ ಮಿಕ್ಸ್ ವಿತರಿಸಲಾಗಿದೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ದೇಶಿಯ ಆಕಳ ಹಾಲು ಬಳಸಿ ಮಿಕ್ಸ್ ತಯಾರು ಮಾಡ ಲಾಗಿದ್ದು, ಮಕ್ಕಳಿಗೆ ಹಾಲಿನ ಜೊತೆಗೆ ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ತಿಂಗಳಿಗೆ 2.5 ಕೋಟಿ ವೆಚ್ಚ ತಗುಲುತ್ತದೆ ಎಂದರು.

ದೇಶದಲ್ಲಿ ಸಮಗ್ರ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ಇದರಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುತ್ತಿದೆ. ಎಂಎಲ್ಸಿ ಚಿದಾನಂದಗೌಡ ಮಾತನಾಡಿ ಕೆಲ ಕಿಡಿ ಗೇಡಿಗಳು ಶಿಕ್ಷಣ ಇಲಾಖೆ, ಮತ್ತು ಶಿಕ್ಷಣ ಸಚಿವರ ಮೇಲೆ ಹಲವಾರು ಆರೋಪಗಳನ್ನು ಮಾಡಿದಾಗ ಅದನ್ನು ನಿಬಾ ಯಿಸಿ, ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗೆ ತಂದವರು ಶಿಕ್ಷಣ ಸಚಿವರು. ಇದು ಸಿಎಂ, ಶಿಕ್ಷಣ ಸಚಿವರ ಮತ್ತು ಸರ್ಕಾರದ ಕಾರ್ಯ ವೈಖರಿಯ ಬದ್ದತೆಯನ್ನು ತೋರಿಸುತ್ತದೆ ಎಂದರು.

ಸತ್ಯ ಸಾಯಿ ಟ್ರಸ್ಟ್ ನ ಜಯಪ್ರಕಾಶ್, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿದರು. ಡಿಡಿಪಿಐ ಕೆ.ಜಿ. ರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ತಹಶೀಲ್ದಾರ್ ಸುರೇಶ್ ಆಚಾರ್, ಕಾರ್ಯದರ್ಶಿ ಆನಂದ್ ಸಾಯಿ, ಜಯಪ್ರಕಾಶ್, ಡಿವೈಪಿಸಿ ವೈ.ಎನ್. ರಾಮ ಕೃಷ್ಣಯ್ಯ, ರಕ್ತದಾನಿ ಶಿಕ್ಷಕರ ಬಳಗದ ಶಶಿ ಕುಮಾರ್ ಇತರರಿದ್ದರು.

Edited By : Abhishek Kamoji
Kshetra Samachara

Kshetra Samachara

03/10/2022 07:31 pm

Cinque Terre

3.22 K

Cinque Terre

0