ಮಧುಗಿರಿ: ದಿನಸಿ ಅಂಗಡಿ ಕಳ್ಳತನಕ್ಕೆ ಯತ್ನಿಸಿ, ಅಂಗಡಿಯ ಸಿಸಿಟಿವಿ ಕದ್ದೊಯ್ದಿರುವ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.
ಮಧುಗಿರಿ ತಾಲ್ಲೂಕಿನ ಬಡವ ನಹಳ್ಳಿ ಠಾಣಾ ವ್ಯಾಪ್ತಿಯ ಡಿ. ಕೈಮರ ಗ್ರಾಮದಲ್ಲಿ ನಾಗೇಶ್ ಎಂಬುವರ ದಿನಸಿ ಅಂಗಡಿ ಮತ್ತು ಪಕ್ಕದಲ್ಲಿರುವ ಮತ್ತೊಂದು ಒಡವೆ ಅಂಗಡಿಯ ಬೀಗವನ್ನು ಹೊಡೆದು ದೋಚಲು ಯತ್ನಿಸಿರುವ ಕಳ್ಳರು ಅಂಗಡಿಯಲ್ಲಿ ನಗದು ದೊರೆಯದ ಕಾರಣ ಅಲ್ಲಿದ್ದ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಮುರಿದು ಡಿವಿಆರ್ ಹೊತ್ತೊಯ್ದಿದ್ದಾರೆ. ಪಕ್ಕದ ಒಡವೆ ಅಂಗಡಿಯ ಸಿಸಿ ಕ್ಯಾಮೆರಾ ತಿರುಚಿದ್ದಾರೆ. ಪಕ್ಕದ ಮನೆಯವರು ಎಚ್ಚರವಾಗಿ ಹೊರಗೆ ಬಂದಾಗ 3 ಜನ ಮುಸುಕುಧಾರಿ ಕಳ್ಳರು ಕಾಲ್ಕಿತ್ತಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆ ಡಿ. ಕೈಮರದ ಮದ್ಯ ದಂಗಡಿಯ ಕಳ್ಳತನಕ್ಕೆ ಯತ್ನಿಸಿ ಇದೇ ರೀತಿ ಸಿಸಿಟಿವಿಯನ್ನು ಕದ್ದೊಯ್ದಿದ್ದರು. ಸ್ಥಳಕ್ಕೆ ಬಡವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಸೈ ತಾರಾಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಲೂಕಿನ ಜನತೆ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು ರಾಜ್ಯ ಹೆದ್ದಾರಿಯಲ್ಲಿ ಊರಿನ ಮಧ್ಯಭಾಗದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರು ವುದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಕೈಮರ ಗ್ರಾಮದಲ್ಲಿ ಬ್ಯಾಂಕ್ ಸಹ ಇದ್ದು , ವಿವಿಧ ಅಂಗಡಿಗಳಿರುವುದರಿಂದ ರಾತ್ರಿ ವೇಳೆ ಪೋಲಿಸ್ ಬೀಟ್ ಹೆಚ್ಚಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ವರದಿ: ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು
Kshetra Samachara
03/10/2022 11:05 pm