ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕ್ವಾರಿಯಲಿ ಕೆಲಸ ಮಾಡುವಾಗ ಜಾರಿಬಿದ್ದು ಕಾರ್ಮಿಕ ಸಾವು

ತುಮಕೂರು: ತಾಲ್ಲೂಕು ಹೊಸಹಳ್ಳಿ ಸಮೀಪವಿರುವ ಗೌರಿ ಅಕ್ಷಯ ಜೆಲ್ಲಿ ಕ್ರಷರ್ ನ ಕ್ವಾರಿಯಲಿ ಕೆಲಸ ಮಾಡುವಾಗ ಕಾರ್ಮಿಕನೊಬ್ಬ ಬಂಡೆ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಕಾರ್ಮಿಕ ಕೊಳ್ಳೇಗಾಲ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಈರಣ್ಣ ಎಂದು ತಿಳಿದು ಬಂದಿದೆ. ಇದೇ ಕ್ವಾರಿಯಲ್ಲಿ ಕೆಲ ತಿಂಗಳ ಹಿಂದೆ ಸಹ ಕಾರ್ಮಿಕನೋರ್ವ ಕೆಲಸ ಮಾಡುವಾಗ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಒಟ್ಟು ಹದಿನಾರು ಎಕರೆಯ ಪ್ರದೇಶದಲ್ಲಿ ಗೌರಿ ಅಕ್ಷಯ ಕ್ವಾರಿಯವರು ಕೆಲಸ ಮಾಡುತ್ತಿದ್ದು, ಈ ಕ್ವಾರಿಯು ಬಹುತೇಕ ಪ್ರದೇಶ ಕಡಿದಾದ ಬಂಡೆಗಲಿನ ಬೆಟ್ಟವಾಗಿದೆ. ಕಾರ್ಮಿಕರು ಹಗ್ಗ ಕಟ್ಟಿಕೊಂಡು ಕಡಿದಾದ ಬೆಟ್ಟಹತ್ತಿ ಬಂಡೆಗೆ ರಂದ್ರ ಕೊರೆದು‌ ಬ್ಲಾಸ್ಟ್ ಮಾಡಬೇಕಾಗಿದೆ. ಹೀಗೆ ಬಂಡೆಗೆ ರಂದ್ರ ಕೊರೆಯುವಾಗ ಕಾರ್ಮಿಕ ಈರಣ್ಣ ಅಯತಪ್ಪಿ ಬಂಡೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಭಾಗದಲ್ಲಿ ಹಲವಾರು ಕಲ್ಲು ಕ್ವಾರಿಗಳಿದ್ದು, ಕ್ವಾರಿ ಮಾಲೀಕರು ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡುವುದಿಲ್ಲ. ಇನ್ನು ಕಾರ್ಮಿಕರು ಬಹುತೇಕ ಬೇರೆ ರಾಜ್ಯದವರು. ಕಾರ್ಮಿಕರು ಕ್ವಾರೆಯಲ್ಲಿ ಬಿದ್ದು ಸತ್ತರೂ ಸಹ ಯಾರ ಗಮನಕ್ಕೂ ಬರುವುದಿಲ್ಲ. ಪೊಲೀಸ್, ಗಣಿ ಮತ್ತು ಭೂ ವಿಜ್ಙಾನ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಣಿ ಮಾಲೀಕರೊಂದಿಗೆ ಶಾಮೀಲಾಗಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

22/09/2022 11:46 pm

Cinque Terre

8.38 K

Cinque Terre

0