ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳ ಆತ್ಮಹತ್ಯೆಗೆ ಶರಣ

ತುಮಕೂರು: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರು ತಾಲ್ಲೂಕು ಅರಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಮಧುಗಿರಿ ತಾಲ್ಲೂಕಿನ ಕವಣದಾಲದ ಪುಷ್ಪಲತಾ, ಮಕ್ಕಳಾದ ಹೇಮಾ ಮತ್ತು ಯಶವಂತ್ ಎಂದು ಗುರುತಿಸಲಾಗಿದೆ.

ಪುಷ್ಪಲತಾ ತನ್ನ ಇಬ್ಬರು ಮಕ್ಕಳೊಂದಿಗೆ ತಮ್ಮನ ಮನೆ ಅರಕೆರೆಗೆ ಬಂದಿದ್ದರು ಎಂದು ತಿಳಿದುಬಂದಿದೆ. ಅಂಗಡಿಗೆ ಹೋಗಿ ಬರುತ್ತೇವೆಂದು ತಮ್ಮನ ಮನೆಯವರಿಗೆ ಹೇಳಿ ಹೋಗಿದ್ದು, ನಂತರ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬಾವಿಯಲ್ಲಿ ಪುಷ್ಪಲತಾ ಶವ ತೇಲುತ್ತಿದ್ದು ಕೋರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ಶವಗಳನ್ನು ಹೊರಗೆ ತೆಗೆದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Edited By : Manjunath H D
PublicNext

PublicNext

15/09/2022 04:34 pm

Cinque Terre

35.9 K

Cinque Terre

0