ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಮಯಾಂಕ್ ಅಗರವಾಲ್‌ ನಾಯಕ, ತಂಡ ಪ್ರಕಟ

ಬೆಂಗಳೂರು : ಆರಂಭಿಕ ಬ್ಯಾಟರ್ ಮಯಾಂಕ್ ಅಗರವಾಲ್ ಅವರನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಈ ಬಾರಿ ಯುವ ಪ್ರತಿಭೆಗಳಾದ ಮೈಸೂರಿನ ಬ್ಯಾಟರ್ ಎಲ್. ಆರ್. ಚೇತನ್ ಹಾಗೂ ವಿಕೆಟ್‌ಕೀಪರ್ ಲವನೀತ್ ಸಿಸೊಡಿಯಾ ಸ್ಥಾನ ಪಡೆದಿದ್ದಾರೆ. ಬಿರುಸಿನ ಹೊಡೆತಗಾರ ಅಭಿನವ್ ಮನೋಹರ್ ಸ್ಥಾನ ಗಳಿಸಿದ್ದಾರೆ. ಇತ್ತಿಚೆಗೆ ಬಿಡುಗಡೆ ಮಾಡಿದ್ದ ಸಂಭವನೀಯರ ಪಟ್ಟಿಯಲ್ಲಿದ್ದ ರೋಹನ್ ಪಾಟೀಲ ಅವರಿಗೆ ಸ್ಥಾನ ಲಭಿಸಿಲ್ಲ. ಅನುಭವಿ ಆಟಗಾರ ಕರುಣ್ ನಾಯರ್ ಅವರಿಗೆ ಸಂಭವನೀಯರ ತಂಡದಲ್ಲಿ ಸ್ಥಾನ ಕೊಟ್ಟಿರಲಿಲ್ಲ.

ಅ.11 ರಿಂದ ಮೊಹಾಲಿಯಲ್ಲಿ ಟೂರ್ನಿಯು ನಡೆಯಲಿದೆ. ಕರ್ನಾಟಕವು ತನ್ನ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಎದುರಿಸಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿರುವ ತಂಡ ಇಂತಿದೆ:

ಮಯಾಂಕ್ ಅಗರವಾಲ್ (ನಾಯಕ), ದೇವದತ್ತ ಪಡಿಕ್ಕಲ್, ಮನೀಷ್ ಪಾಂಡೆ, ಎಲ್‌.ಆರ್. ಚೇತನ್, ಅಭಿನವ್ ಮನೋಹರ್, ಮನೋಜ್ ಬಾಂಢಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಲವನೀತ್ ಸಿಸೊಡಿಯಾ (ವಿಕೆಟ್‌ಕೀಪರ್), ಬಿ.ಆರ್. ಶರತ್ (ವಿಕೆಟ್‌ಕೀಪರ್), ವಿ. ಕೌಶಿಕ್, ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಎಂ. ವೆಂಕಟೇಶ್. ಪಿ.ವಿ. ಶಶಿಕಾಂತ್ (ಮುಖ್ಯ ಕೋಚ್), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್)

Edited By :
PublicNext

PublicNext

07/10/2022 06:06 pm

Cinque Terre

70.58 K

Cinque Terre

0

ಸಂಬಂಧಿತ ಸುದ್ದಿ