ಗುವಾಹಟಿ: ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೆ 238 ರನ್‌ಗಳ ಗುರಿ ನೀಡಿದೆ.
3 ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಇಂದು ಗುವಾಹಟಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ. ತಂಡದ ಪರ ಕೆ.ಎಲ್.ರಾಹುಲ್ 57 ರನ್, ಸೂರ್ಯಕುಮಾರ್ ಯಾದವ್ 61 ರನ್, ವಿರಾಟ್ ಕೊಹ್ಲಿ ಅಜೇಯ 49 ರನ್, ನಾಯಕ ರೋಹಿತ್ ಶರ್ಮಾ 43 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 17 ರನ್ ಬಾರಿಸಿದರು.
PublicNext
02/10/2022 08:53 pm