ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶತಕ ಶತಕಗಳ ಶತಕಕ್ಕೆ ಮುನ್ನುಡಿ ಬರೆದ ಕೊಹ್ಲಿ; ನೀಗಿದ 4 ವರ್ಷಗಳ ರನ್ ಬರ

ದುಬೈ: ಬರೊಬ್ಬರಿ ನಾಲ್ಕು ವರ್ಷಗಳಿಂದ ರನ್ ಬರ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಕ್ರಿಕೆಟ್ ಕರಿಯರ್ ಅಂತಿಮ ಹಂತ ತಲುಪಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಈ ನಡುವೆ ಕೊಹ್ಲಿ ಪುಟಿದೇಳುವ ಪ್ರಯತ್ನ ಪಟ್ಟರೂ, ಸಾಧ್ಯವಾಗದೆ ಟೆಸ್ಟ್, ಏಕದಿನ, ಟಿಟ್ವೆಂಟಿ, ಐಪಿಎಲ್ ಹೀಗೆ ಒಂದರ ಹಿಂದೆ ಒಂದು ನಾಯಕತ್ವ ತ್ಯಜಿಸಿ ಅಚ್ಚರಿ ಮೂಡಿಸಿದ್ದರು‌.

ದಿಗ್ಗಜ ಬ್ಯಾಟ್ಸಮನ್ ಕೊಹ್ಲಿಗೆ 2022ರ ಏಷ್ಯಾಕಪ್ ಟೂರ್ನಿ ನಿರ್ಣಾಯಕವಾಗಿತ್ತು. ವಿರಾಟ್ ಕ್ರಿಕೆಟ್ ಬದುಕಿನ ಅಂತಿಮ ಹಂತದಲ್ಲಿ ರನ್ ಸಿಡಿಸಲೇ ಬೇಕಾದ ಒತ್ತಡದಲ್ಲಿದ್ದರು. ಒಂದು ದಶಕಗಳ ಕಾಲ ರನ್ ಮಷಿನ್ ಆಗಿದ್ದ ಕೊಹ್ಲಿ 2018 ರ ಈಚೆಗೆ ಅತೀವ ರನ್ ಬರ ಎದುರಿಸುವಂತಾಗಿತ್ತು. ಆಡಿದ ನಾಲ್ಕು ವರ್ಷದಲ್ಲಿ ಒಂದೇ ಒಂದು ಶತಕ ಹೊಡೆಯಲು ವಿರಾಟ್ ಹೆಣಗಾಡುವಂತಾಗಿತ್ತು.

2022 ರ ಏಷ್ಯಾಕಪ್ ಆರಂಭಿಕ ಹಂತದಲ್ಲೆ ಹೊಸ ಚಾರ್ಮ್ ನೊಂದಿಗೆ ಕಣಕ್ಕಿಳಿದಿದ್ದ ಕೊಹ್ಲಿ ನಾಲ್ಕು ವರ್ಷಗಳಿಂದ ಎದುರಿಸಿದ್ದ ರನ್ ಬರವನ್ನು ನೀಗಿಸಿಕೊಂಡರು. ಬದ್ಧ ವೈರಿ ಪಾಕಿಸ್ತಾನ ಎದುರು ಅರ್ಧಶತಕ ಸಿಡಿಸಿ ಮಿಂಚಿದರು. ಏಷ್ಯಾಕಪ್ ನಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಕೊಹ್ಲಿ ಶ್ರೀಲಂಕಾದ ಎದುರು ಪಿಪ್ಟಿ ಹೊಡೆದರೆ ಅಪಘಾನಿಸ್ತಾನ ಎದುರು ಬೊಂಬಾಟ್ ಸಂಚೂರಿ ಮೂಲಕ ಹಳೆ ಖದರ್ ತೋರಿಸಿದರು.

ಅಪಘಾನಿಸ್ತಾನದ ಎದುರಿನ ಪಂದ್ಯದಲ್ಲಿ ಕ್ರಿಡಾಗಣದ ಮೂಲೆ ಮೂಲೆಗೂ ಸಿಕ್ಸರ್ ಸಿಡಿಸುವ 62 ಬಾಲ್‌ಗಳಲ್ಲಿ 122 ರನ್ ಚಚ್ಚುವ ಮೂಲಕ ಮತ್ತೆ ಲಯಕ್ಕೆ ಮರಳಿದರು. ಹಲವು ವರ್ಷಗಳಿಂದ ನಿರಾಸೆಯಲ್ಲಿದ್ದ ವಿರಾಟ್ ಅಭಿಮಾನಿಗಳು ಈಗ ಮತ್ತೆ ಸಂತಸಗೊಂಡಿದ್ದಾರೆ.

ಮುದಕನಗೌಡ ಪಾಟೀಲ ಪಬ್ಲಿಕ್ ನೆಕ್ಸ್ಟ್ ನ್ಯೂಸ್ ಡೆಸ್ಕ್ ಹುಬ್ಬಳ್ಳಿ

Edited By : Nirmala Aralikatti
PublicNext

PublicNext

08/09/2022 09:29 pm

Cinque Terre

29.39 K

Cinque Terre

3

ಸಂಬಂಧಿತ ಸುದ್ದಿ