ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಷ್ಯಾ ಕಪ್ 2022: ಕೊನೆಯ ಓವರ್‌ನಲ್ಲಿ ಅಫ್ಘಾನ್ ವಿರುದ್ಧ ಗೆದ್ದ ಪಾಕ್‌; ಫೈನಲ್ ರೇಸ್‌ನಿಂದ ಭಾರತ ಔಟ್

ದುಬೈ: ಏಷ್ಯಾ ಕಪ್ 2022ರ ಸೂಪರ್ 4 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನವು ಕೊನೆಯ ಓವರ್‌ನಲ್ಲಿ 1 ವಿಕೆಟ್‌ನಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಶ್ರೀಲಂಕಾ ಜೊತೆಗೆ ಫೈನಲ್‌ನಲ್ಲಿ ಪಾಕಿಸ್ತಾನ ಹೋರಾಡಲಿದೆ. ಇನ್ನು ಭಾರತಕ್ಕೆ ಇದ್ದ ಫೈನಲ್‌ ಪ್ರವೇಶದ ಎಲ್ಲಾ ದಾರಿ ಮುಚ್ಚಿದಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನವು 6 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 4 ಎಸೆತಗಳು ಬಾಕಿ ಇರುವಂತೆ 9 ವಿಕೆಟ್ ನಷ್ಟಕ್ಕೆ 131 ರನ್‌ ಗಳಿಸಿ ಗೆದ್ದು ಬೀಗಿದೆ.

ಅಫ್ಘಾನಿಸ್ತಾನ ಕೂಡ ಅಧಿಕೃತವಾಗಿ ಫೈನಲ್‌ ರೇಸ್‌ನಿಂದ ಹೊರಗುಳಿದಿದೆ. ಇದೀಗ ಭಾನುವಾರ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ನಾಳೆ ಡೆಡ್-ರಬ್ಬರ್ ಎನ್ಕೌಂಟರ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.

Edited By : Vijay Kumar
PublicNext

PublicNext

08/09/2022 06:58 am

Cinque Terre

46.34 K

Cinque Terre

0

ಸಂಬಂಧಿತ ಸುದ್ದಿ