ದುಬೈ: ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕ, ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಉತ್ತಮ ಆರಂಭದಿಂದ ಭಾರತ ತಂಡವು ಪಾಕಿಸ್ತಾನಕ್ಕೆ 182 ರನ್‌ಗಳ ಗುರಿ ನೀಡಿದೆ.
ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿದೆ. ತಂಡದ ಪರ ವಿರಾಟ್ ಕೊಹ್ಲಿ 60 ರನ್, ಕೆ.ಎಲ್.ರಾಹುಲ್ 28 ರನ್, ರೋಹಿತ್ ಶರ್ಮಾ 28 ರನ್ ಗಳಿಸಿದರು. ಇನ್ನು ರಿಷಭ್ ಪಂತ್ ಸಿಕ್ಕ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು. ಅವರು 12 ಎಸೆತಗಳಲ್ಲಿ 14 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ವಿಶೇಷವೆಂದರೆ ಕೊನೆಯ ಎರಡು ಎಸೆತಗಳನ್ನು ಎದುರಿಸಿದ ರವಿ ಬಿಷ್ಣೋಯ್ ಎರಡು ಬೌಂಡರಿ ಬಾರಿಸಿ ಮಿಂಚಿದರು.
ಇನ್ನು ಪಾಕಿಸ್ತಾನದ ಪರ ಶಾದಾಬ್ ಖಾನ್ 2 ವಿಕೆಟ್, ನಸೀಮ್ ಶಾ, ಮೊಹಮ್ಮದ್ ಹಸ್ನೈನ್, ಹ್ಯಾರಿಸ್ ರೌಫ್ ಹಾಗೂ ಮೊಹಮ್ಮದ್ ನವಾಜ್ ತಲಾ 1 ವಿಕೆಟ್ ಪಡೆದುಕೊಂಡರು.
PublicNext
04/09/2022 09:20 pm