ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಷ್ಯಾ ಕಪ್ : ಇಂದು ಪಾಕಿಸ್ತಾನ್ ಹಾಂಕಾಂಗ್ ಪೈಟ್ ! ಸೋತವರು ಔಟ್

ಏಷ್ಯಾಕಪ್ ಪ್ರಶಸ್ತಿ ಸುತ್ತಿಗಾಗಿ ಲೀಗ್ ಹಂತದಲ್ಲಿ ಹಾಂಕಾಂಗ್ ಪಾಕಿಸ್ತಾನ ತಂಡಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮುಖಾಮುಖಿ ಆಗಲಿವೆ.

ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದವರು ಟೂರ್ನಿಯಲ್ಲಿ ಉಳಿಯಲಿದ್ದಾರೆ. ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ ಗೆದ್ದ ತಂಡ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದು ಸೆಪ್ಟೆಂಬರ್ 4 ರಂದು ಭಾರತ ವಿರುದ್ಧ ಸೆಣೆಸಾಟ ನಡೆಸಲಿದೆ.

ಆಕಸ್ಮಾತ್ ಇಂದು ಪಾಕಿಸ್ತಾನ ಜಯ ಸಾಧಿಸಿದರೆ ಮತ್ತೆ ಭಾರತ್ ಪಾಕ್ ಕದನ ಪುನಃ ನಡೆಯಲಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಪಾಕಿಸ್ತಾನ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಕಳೆದ ಪಂದ್ಯದಲ್ಲಿ ಭಾರತ ಸೋಲೋಪ್ಪಿದ್ದಾರೆ. ಸ್ವತಃ ನಾಯಕ ಬಾಬರ್ ಅಜಮ್ ವೈಫಲ್ಯ ಅನುಭವಿಸಿದರು. ರಿಜ್ವಾನ್ 43 ರನ್​ ಕೊಡುಗೆ ನೀಡಿದ್ದರಷ್ಟೆ. ಇಫ್ತಿಖರ್ ಅಹ್ಮದ್ 28 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸಮನ್ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು. ಬೌಲಿಂಗ್'ನಲ್ಲಿ ಕೂಡ ನಸೀಂ ಶಾ ಹಾಗೂ ಶಾದಾಬ್ ಖಾನ್ ಬಿಟ್ಟರೆ ಉಳಿದವರೆಲ್ಲ ದುಬಾರಿಯಾಗಿದ್ದರು.

ನಸೀಂ ಶಾ ಕಳೆದ ಭಾರತ ವಿರುದ್ಧದ ಪಂದ್ಯದಲ್ಲಿ ಗ್ರಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇಂದಿನ ಪಂದ್ಯಕ್ಕೆ ಇವರ ಲಭ್ಯತೆ ಬಗ್ಗೆ ಅನುಮಾನವಿದೆ. ಹೀಗಾದಲ್ಲಿ ಇದು ತಂಡಕ್ಕೆ ಮತ್ತೊಂದು ಹೊಡೆತ ಖಚಿತ. ಏಕೆಂದರೇ ? ಏಷ್ಯಾಕಪ್ ಆರಂಭಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಶಾಹೀನ್ ಅಫ್ರಿದಿ ಜಾಗಕ್ಕೆ ನಸೀಂ ಬಂದಿದ್ದರು. ಈಗ ನಸೀಂ ಕೂಡ ಹೊರಗುಳಿದರೆ ಪಾಕ್​ಗೆ ಹಿನ್ನಡೆಯಾಗಲಿದೆ. ಬಾಬರ್ ಅಜಮ್ ಮೇಲೆ ಒತ್ತಡ ಕೂಡ ಹೆಚ್ಚಿದ್ದು ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಬೇಕಿದೆ.

ಇನ್ನೂ ಹಾಂಕಾಂಗ್ ತಂಡವನ್ನು ದುರ್ಬಲ ಎಂದು ಹೇಳಲು ಸಾಧ್ಯವಿಲ್ಲಾ. ಭಾರತ ವಿರುದ್ಧ ಸೋತಿದ್ದರೂ ಕಠಿಣ ಪೈಪೋಟಿ ನೀಡಿತ್ತು. ಬಾಬರ್ ಹಯಾತ್ ಹಾಗೂ ಕಿಂಚಿತ್ ಶಾ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇವರಿಗೆ ನಿಜಾಖಾತ್ ಖಾನ್, ಯಾಸೀಂ ಮುರ್ತಾಜ ಹಾಗೂ ಜೀಶನ್ ಅಲಿ ಸಾಥ್ ನೀಡಿದರೆ ಪಾಕಿಸ್ತಾನ ಪರದಾಡುವುದು ಖಚಿತ. ಆದರೆ ಹಾಂಕಾಂಗ್ ಬೌಲರ್​ಗಳು ದುಬಾರಿಯಾಗುತ್ತಿದ್ದಾರೆ.

ಪ್ರಮುಖ ಬೌಲರ್ ಹರೂನ್ ಅರ್ಶದ್ ಕಳೆದ ಪಂದ್ಯದಲ್ಲಿ 3 ಓವರ್​ಗೆ 53 ರನ್ ನೀಡಿದ್ದರು. ಹೀಗಾಗಿ ಬೌಲರ್​ಗಳು ಎದುರಾಳಿಯನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸಬೇಕಿದೆ.ಇಂದು ಪಂದ್ಯದ ಟಾಸ್ ರಾತ್ರಿ 7 ಗಂಟೆಗೆ ನಡೆಯಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ.ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

Edited By :
PublicNext

PublicNext

02/09/2022 04:36 pm

Cinque Terre

50.07 K

Cinque Terre

4

ಸಂಬಂಧಿತ ಸುದ್ದಿ