ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಏಷ್ಯಾಕಪ್ನ ದ್ವಿತೀಯ ಪಂದ್ಯ ಅಂದುಕೊಂಡಂತೆ ರಣರೋಚಕವಾಗಿತ್ತು. ಭಾರತ-ಪಾಕಿಸ್ತಾನ ಬದ್ದವೈರಿಗಳ ನಡುವಣ ಕಾದಾಟ ಕೊನೆಯ ಓವರ್ಗೆ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕಠಿಣ ಟಾರ್ಗೆಟ್ ಇರದಿದ್ದರೂ ಅಭಿಮಾನಿಗಳನ್ನ ಈ ಪಂದ್ಯ ಹಿಡಿದುಕೂರಿಸಿತ್ತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ರೋಚಕ ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾ 5 ವಿಕೆಟ್ಗಳ ಗೆಲುವು ಸಾಧಿಸುವಂತೆ ಮಾಡಿದರು.
ಇನ್ನು ಗೆಲುವಿನ ಸಂಭ್ರಮ ಸ್ಟೇಡಿಯಂನಲ್ಲಿ ಅಷ್ಟೇ ಅಲ್ಲದೇ, ದೇಶದೆಲ್ಲೆಡೆ ಸಂಭ್ರಮ ಮನೆಮಾಡಿದೆ. ಅಲ್ಲದೇ ಶನಿವಾರ ಉದ್ಘಾಟನಾ ಪಂದ್ಯವನ್ನಾಡಿದ ಅಫ್ಘಾನಿಸ್ತಾನ ತಂಡ ಶ್ರೀಲಂಕಾವನ್ನು ಬಗ್ಗು ಬಡೆದಿದ್ದು, ಅದೇ ಖುಷಿಯಲ್ಲಿದ್ದ, ಅಫ್ಘಾನ್ ದೇಶದ ಯುವಕರು ಕೂಡ ಈಗ ಪಾಕ್ ಸೋಲನ್ನ ಮನೋಹಕವಾಗಿ ಸಂಭ್ರಮಿಸಿದ್ದಾರೆ..
ಪಂದ್ಯ ವೀಕ್ಷಿಸುತ್ತಿದ್ದ ಅಫ್ಘಾನ್ ಯುವಕರು ರೋಚಕ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯಗೆ ಫಿದಾ ಆಗಿ ಟಿವಿಯ ಸ್ಕ್ರೀನಿಗೆ ಮುತ್ತಕ್ಕಿ ಕುಣಿದಾಡಿದ್ದಾರೆ.. ಭಾರತೀಯ ಜನರೊಂದಿಗೆ ಈ ವಿಜಯವನ್ನು ಆಚರಿಸಿದ್ದಾರೆ.
PublicNext
29/08/2022 03:03 pm