ನವದೆಹಲಿ: ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ 2022ರ ಏಷ್ಯಾ ಕಪ್‌ಗೂ ಮುನ್ನ ಸುಮಾರು 2 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ GLS ಕಾರನ್ನು ಖರೀದಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಸೂರ್ಯಕುಮಾರ್ ಅವರು ನಿಸ್ಸಾನ್ 1 ಟನ್ ಜೊಂಗಾ ಖರೀದಿಸಿದ್ದರು. ಸೂರ್ಯಕುಮಾರ್ 2021ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು ಮತ್ತು ಇದುವರೆಗೆ 13 ಏಕದಿನ ಮತ್ತು 23 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.
ಸೂರ್ಯಕುಮಾರ್ ಯಾದವ್ ಬಳಿ ಈಗಾಗಲೇ ಬಿಎಂಡಬ್ಲ್ಯು 5 ಸಿರೀಸ್ 530ಡಿ ಸ್ಪೋರ್ಟ್, ರೇಂಜ್ ರೋವರ್ ಇವೊಕ್, ಆಡಿ ಎ6 ನಂತಹ ಐಷಾರಾಮಿ ಕಾರುಗಳಿವೆ. ಇದಲ್ಲದೆ, ಹಾರ್ಲೆ ಡೇವಿಡ್ಸನ್ ಮತ್ತು ಸುಜುಕಿ ಹಯಾಬುಸಾದಂತಹ ಅಲ್ಟ್ರಾ ಐಷಾರಾಮಿ ಬೈಕ್‌ಗಳನ್ನು ಸಹ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಯಲ್ಲಿ ಬಳಸುತ್ತಿದ್ದ ಜೊಂಗಾ ವಾಹನವನ್ನೂ ಅವರು ಖರೀದಿಸಿದ್ದರು.
ಮಾಧ್ಯಮ ವರದಿಗಳ ಪ್ರಕಾರ ಸೂರ್ಯಕುಮಾರ್ ಯಾದವ್ ಒಂದು ವರ್ಷದಲ್ಲಿ 20 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಾರೆ. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು 8 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇದೀಗ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿ ಸೂರ್ಯಕುಮಾರ್ ಯಾದವ್ ಮಿಂಚುತ್ತಿದ್ದಾರೆ. ಅಂದಹಾಗೆ ಸೂರ್ಯಕುಮಾರ್ ಯಾದವ್ ತಮ್ಮ 30ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು ಎಂಬುದು ಇಲ್ಲಿ ವಿಶೇಷ.
PublicNext
12/08/2022 10:41 pm