ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ಮತ್ತು ಕೆನಡಾ ನಡುವಿನ ಕಾಮನ್‌ವೆಲ್ತ್‌ಗ್ರೇಮ್ಸ್ ಹಾಕಿ ಪಂದ್ಯದಲ್ಲಿ ಅನಿರೀಕ್ಷತವಾಗಿಯೇ ಒಂದು ಘಟನೆ ನಡೆದು ಹೋಗಿದೆ. ಎರಡೂ ತಂಡದ ಇಬ್ಬರು ಆಟಗಾರರು ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದಾರೆ.
ಹೌದು. ಆಟದ ಮಧ್ಯದಲ್ಲಿಯೇ ಇಂಗ್ಲೆಂಡ್ ಆಟಗಾರರ ಕ್ರಿಸ್ಟೋಫರ್ ಹಾಗೂ ಕೆನಡಾ ಆಟಗಾರ ಪನೇಸರ್ ಕಾದಾಡಿದ್ದಾರೆ. ಒಬ್ಬ ಜರ್ಸಿ ಹಿಡಿದುಕೊಂಡರೆ,ಮತ್ತೊಬ್ಬ ಜಗಳಾಡಿದ್ದಾರೆ.
ಈ ಘಟನೆ ಬಗ್ಗೆ ರೆಫರಿ ಆಕ್ರೋಶ ವ್ಯಕ್ತಪಡಿಸಿದ್ದು, ಪನೇಸರ್‌ಗೆ ರೆಡ್ ಕಾರ್ಡ್ ತೋರಿ ಗ್ರೌಂಡ್‌ನಿಂದ ಹೊರಗೆ ಹಾಕಿದ್ದಾರೆ. ಕ್ರಿಸ್ಟೋಫರ್‌ಗೆ ಹಳದಿ ಕಾರ್ಡ್ ತೋರಿಸಿದ್ದಾರೆ. ಇನ್ನು ಕೆನಡಾ 2-11 ಗೋಲುಗಳಿಂದ ಸೋತು ಹೋಗಿದೆ.
PublicNext
05/08/2022 05:05 pm