ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ-ವೆಸ್ಟ್ ಇಂಡೀಸ್-ಟಿ-20 ನಾಲ್ಕನೆ ಪಂದ್ಯ ಆಡ್ತಾರಾ ರೋಹಿತ್ ಶರ್ಮಾ.?

ಭಾರತ ಮತ್ತು ವೆಸ್ಟ್ ಇಂಡೀಸ್ ಟಿ-20 ನಾಲ್ಕನೆ ಪಂದ್ಯಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಗೈರಾಗೋ ಸಾಧ್ಯತೆ ಇದೆ. ಬೆನ್ನು ಇಂಜುರಿಯಿಂದ ರೋಹಿತ್ ಶರ್ಮಾ ಮೂರನೇ ಪಂದ್ಯದಲ್ಲಿ ಬಹುಬೇಗನೆ ಪೆವಿಲಿಯನ್‌ಗೆ ತೆರೆಳಿದ್ದರು.

ಟಿ-20 ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಏನೋ ಮಾಡಿದರು. ಆದರೆ, ಐದು ಎಸೆತಗಳಲ್ಲಿ 11 ರನ್ ಗಳಿಸಿದ ರೋಹಿತ್‌ಗೆ ಬೆನ್ನು ಇಂಜುರಿ ಆಯಿತು. ಈ ಕಾರಣಕ್ಕೇನೆ ರೋಹಿತ್ ಮುಂದೇ ಆಡಲೇ ಇಲ್ಲ. ಔಟ್‌ ಹೋಗಿಯೇ ಬಿಟ್ಟರು.

ಬ್ಯಾಟಿಂಗ್ ಮಾಡೋವಾಗ ಬೆನ್ನು ಹಿಡಿದಂತಾಯಿತು. ಈ ಕಾರಣಕ್ಕೆ ಬ್ಯಾಟಿಂಗ್ ಮಾಡಲು ಇಷ್ಟಪಡಲಿಲ್ಲ. ಆದರೆ ಈಗ ಏನೂ ಸಮಸ್ಯೆ ಇಲ್ಲ. ಇನ್ನೆರಡು ದಿನಗಳಲ್ಲಿ ಸುಧಾರಿಸಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Edited By :
PublicNext

PublicNext

04/08/2022 09:19 pm

Cinque Terre

34.12 K

Cinque Terre

0

ಸಂಬಂಧಿತ ಸುದ್ದಿ