ಬರ್ಮಿಂಗ್‌ಹ್ಯಾಮ್: 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಟೇಬಲ್ ಟೆನಿಸ್ ತಂಡ ಫೈನಲ್ ಹಣಾಹಣಿಯಲ್ಲಿ ಸಿಂಗಾಪುರ ತಂಡವನ್ನು 3-1 ಅಂತರದಲ್ಲಿ ಮಣಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಈ ಮೂಲಕ ಭಾರತಕ್ಕೆ ಎರಡು ಚಿನ್ನದ ಪದಕ ಬಂದಿದೆ. ಲಾನ್ ಬಾಲ್ಸ್ನಲ್ಲಿ ವನಿತೆಯರು ಚಿನ್ನ ಗೆದ್ದ ಬೆನ್ನಲ್ಲೇ ಪುರುಷರ ಟೇಬಲ್ ಟೆನ್ನಿಸ್ನಲ್ಲಿ ಚಿನ್ನ ಗೆದ್ದಿದ್ದಾರೆ.
ಶರತ್ ಕಮಲ್ ನೇತೃತ್ವದ ಟೇಬಲ್ ಟೆನ್ನಿಸ್ ಟೀಂ ಬಂಗಾರದ ಪದಕವನ್ನ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಎದುರಾಳಿ ಸಿಂಗಾಪುರ ತಂಡವನ್ನ 3-0 ಸೆಟ್ಗಳ ಅಂತರದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದೆ.
ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಟೆಬಲ್ ಟೆನ್ನಿಸ್ನಲ್ಲಿ 4 ಪದಕಗಳು ಬಂದಂತಾಗಿದೆ. ವಿಶೇಷ ಅಂದ್ರೆ ಮೂರು ಚಿನ್ನದ ಪದಕಗಳು ಬಂದಿವೆ. 2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಇದೇ ಶರತ್ ಕಮಲ್ ನೇತೃತ್ವದ ತಂಡ ಬಂಗಾರದ ಪದಕ ಗೆದ್ದಿತ್ತು. 2010 ರಂದು ದೆಹಲಿಯಲ್ಲಿ ನಡೆದ ಗೇಮ್ಸ್ನಲ್ಲಿ ಕಂಚು ಗೆದಿದ್ದರು.
PublicNext
03/08/2022 07:59 am