ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಈಗ ಕುತೂಹಲಕಾರಿ ಹೇಳಿಕೆಯೊಂದನ್ನ ಕೊಟ್ಟು ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು. ಇತ್ತೀಚಿಗಷ್ಟೇ ಮಿಥಾಲಿ ರಾಜ್, ತಮ್ಮ ಕ್ರಿಕೆಟ್ ಜೀವನದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಅಲ್ಲಿಗೆ ಎಲ್ಲವೂ ಎಂಡ್ ಅಂತಲೇ ಅಭಿಮಾನಿಗಳು ತಿಳಿದುಕೊಂಡಿದ್ದರು.
ಆದರೆ,ಮಿಥಾಲಿ ರಾಜ್ ಹೇಳಿಕೆ ಈಗ ಅಭಿಮಾನಿಗಳಲ್ಲಿ ಹೊಸ ಖುಷಿ ತಂದುಕೊಟ್ಟಿದೆ. ನಿಜ,ಮುಂದಿನ ವರ್ಷ ಆರಂಭ ಆಗೋ ಐಪಿಎಲ್ ಪಂದ್ಯದ ಸೀಸನ್ ನಲ್ಲಿ ಅವಕಾಶ ಸಿಕ್ಕರೆ ಮತ್ತೆ ಬ್ಯಾಟ್ ಹಿಡಿಯುವೆ ಅಂತಲೇ ಮಿಥಾಲಿ ರಾಜ್ ಹೇಳಿಕೊಂಡಿದ್ದಾರೆ.
ಟೋರ್ನಿ ಆರಂಭಗೊಳ್ಳಲು ಇನ್ನೂ ಸಾಕಷ್ಟು ಟೈಮ್ ಇದೆ. ಹಾಗಾಗಿಯೇ ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಅಂತಲೂ ಮಿಥಾಲಿ ರಾಜ್ ಹೇಳಿಕೊಂಡಿದ್ದಾರೆ.
PublicNext
26/07/2022 02:51 pm