ದುಬೈ: ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ ಸ್ಫೋಟಕ ಶತಕ (55 ಎಸೆತಗಳಲ್ಲಿ 117 ರನ್) ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಐಸಿಸಿ ಟಿ-20 ಬ್ಯಾಟರ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಸೂರ್ಯಕುಮಾರ್ ಯಾದವ್ 44 ಸ್ಥಾನ ಏರಿ 732 ರೇಟಿಂಗ್ ಪಡೆದು ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಸೂರ್ಯ ಹೊರತು ಪಡಿಸಿ ಟಾಪ್ 10 ಪಟ್ಟಿಯಲ್ಲಿ ಯಾವೊಬ್ಬ ಟೀಂ ಇಂಡಿಯಾ ಆಟಗಾರರು ಸ್ಥಾನ ಪಡೆದಿಲ್ಲ. ಪಟ್ಟಿಯಲ್ಲಿ ಪಾಕಿಸ್ತಾನ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅನುಕ್ರಮವಾಗಿ ಮೊದಲ ಹಾಗೂ ಎರಡು ಸ್ಥಾನದಲ್ಲೇ ಮುಂದುವರಿದಿದ್ದಾರೆ. ಪಟ್ಟಿಯಲ್ಲಿ ಇಶನ್ ಕಿಶನ್ 12, ರೋಹಿತ್ ಶರ್ಮಾ 18, ಶ್ರೇಯಸ್ ಅಯ್ಯರ್ 21, ವಿರಾಟ್ ಕೊಹ್ಲಿ 25ನೇ ಸ್ಥಾನ ಪಡೆದಿದ್ದಾರೆ.
PublicNext
13/07/2022 06:05 pm