ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಭುವನೇಶ್ವರ್

ಟೀಂ ಇಂಡಿಯಾ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದಿದ್ದಾರೆ.

ಟಿ20 ಪವರ್‌ಪ್ಲೇನಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವಿಶ್ವದಾಖಲೆ ಭುವನೇಶ್ವರ್ ಕುಮಾರ್ ಮುರಿದಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ಮೊದಲ ಓವರ್‌ನಲ್ಲಿ ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬಿರ್ನಿಯನ್ನು 0(2)ಗೆ ಔಟ್ ಮಾಡಿದ ನಂತರ, ಭುವನೇಶ್ವರ್ ಈ ಸಾಧನೆ ಮಾಡಿದ್ದಾರೆ. ಅವರು ಈವರೆಗೂ ಟಿ20 ಕ್ರಿಕೆಟ್‌ನ ಪವರ್‌ಪ್ಲೇನಲ್ಲಿ 34 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಅವರು 33 ವಿಕೆಟ್‌ಗಳನ್ನು ಪಡೆದಿದ್ದ ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರನ್ನು ಹಿಂದಿಕ್ಕಿದರು.

Edited By : Vijay Kumar
PublicNext

PublicNext

27/06/2022 03:48 pm

Cinque Terre

26.86 K

Cinque Terre

0