ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಹಿರಿಯ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಸ್ಪಷ್ಟವಾದ ಪಾತ್ರವನ್ನ (ಕ್ರಮಾಂಕವನ್ನ) ನೀಡಲಾಗಿದೆ ಎಂದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಜೂನ್ 9ರಿಂದ ಆರಂಭಗೊಳ್ಳಲಿರುವ ಐದು ಪಂದ್ಯಗಳ ಟಿ20 ಸರಣಿಯ ಸಿದ್ಧತೆ ಕುರಿತಾಗಿ ದೆಹಲಿಯಲ್ಲಿ ಮಾತನಾಡಿದ ದ್ರಾವಿಡ್, ದಿನೇಶ್ ಕಾರ್ತಿಕ್ ಅನುಭವ ಟೀಂ ಇಂಡಿಯಾದಲ್ಲಿ ಪ್ರಮುಖ ಪಾತ್ರವಹಿಸುವ ಕುರಿತು ಮುನ್ಸೂಚನೆ ಕೊಟ್ಟಿದ್ದಾರೆ.
"ದಿನೇಶ್ ಅವರ ಪಾತ್ರವು ಸ್ಪಷ್ಟವಾಗಿದೆ. ಆಟದ ಹಿನ್ನಲೆಯಲ್ಲಿ, ಅವರು ವ್ಯತ್ಯಾಸವನ್ನು ಮಾಡಬಹುದು. ಅದಕ್ಕಾಗಿಯೇ ಅವರನ್ನು ಆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಲು ಮತ್ತು ಆರ್‌ಸಿಬಿಯಂತೆ ಭಾರತ ಪರವೂ ಮಿಂಚಲು ಅವರನ್ನು ಆಯ್ಕೆ ಮಾಡಲಾಗಿದೆ" ಎಂದು ದ್ರಾವಿಡ್ ಹೇಳಿದ್ದಾಗಿ ವರದಿಯಾಗಿದೆ.
PublicNext
08/06/2022 07:47 am