ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

* ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್

ನವದೆಹಲಿ : ದೀಪಕ್ ಚಹರ್ ಭಾರತ ಕ್ರಿಕೆಟ್ ಟೀಮ್ ನ ಆಲ್ ರೌಂಡರ್ ಜೂನ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಗೆಳತಿ ಜಯಾ ಭಾರದ್ವಾಜ್ ಹಸೆಮಣೆ ಏರಿದ ಚಹರ್ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಪತ್ನಿ ಬಗ್ಗೆ ತಮ್ಮ ಮನದಾಳದ ಮಾತನ್ನು ವಿವರಿಸಿದ್ದಾರೆ.

ನಾನು ನಿನ್ನನ್ನು ಮೊದಲ ಬಾರಿ ಭೇಟಿಯಾದಾಗ ನನ್ನ ಜೀವನಕ್ಕೆ ನೀನೇ ಸರಿಯಾದ ವ್ಯಕ್ತಿ ಎಂದು ತಿಳಿದಿದ್ದೆ. ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಜೊತೆಯಲ್ಲಿ ಆನಂದಿಸಿದ್ದೇವೆ ಹಾಗೂ ನಿನ್ನನ್ನು ಯಾವಾಗಲೂ ಹೀಗೇ ಸಂತೋಷವಾಗಿಡಲು ಬಯಸುತ್ತೇನೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಮಗೆ ಎಲ್ಲರ ಆಶೀರ್ವಾದ ಬೇಕು ಎಂದು ಬರೆದಿದ್ದಾರೆ.

ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ನಲ್ಲಿ ದೀಪಕ್ ಜಯಾಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ್ದರು.

Edited By : Nirmala Aralikatti
PublicNext

PublicNext

02/06/2022 10:44 pm

Cinque Terre

72.58 K

Cinque Terre

1

ಸಂಬಂಧಿತ ಸುದ್ದಿ