ಮುಂಬೈ: ಬಾಲಿವುಡ್ ನಾಯಕ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಕೊನೆಗೂ ಇಂಡಸ್ಟ್ರಿಗೆ ಕಾಲಿಡಲು ಸಜ್ಜಾಗಿದ್ದಾನೆ. ನಟ-ನಿರ್ಮಾಪಕ ಕರಣ್ ಜೋಹರ್ ಈ ಹ್ಯಾಂಡ್ಸಮ್ ಹುಡುಗನನ್ನ ಲಾಂಚ್ ಮಾಡಲು ಮುಂದಾಗಿದ್ದಾರೆ.
ಮಲೆಯಾಳಂ ಭಾಷೆಯ ಹೃದಯಂ ಚಿತ್ರದ ಹಿಂದಿ ರಿಮೇಕ್ ಮೂಲಕವೇ ಇಬ್ರಾಹಿಂ ಅಲಿ ಖಾನ್ ಬಾಲಿವುಡ್‌ಗೆ ಬರಲು ರೆಡಿ ಆಗುತ್ತಿದ್ದಾರೆ.
ಹೃದಯಂ ಚಿತ್ರದ ಕಥೆ ಇಬ್ರಾಹಿಂಗೆ ಸೂಕ್ತವಾಗಿಯೇ ಇದೆ. ಈ ಹಿನ್ನೆಲೆಯಲ್ಲಿಯೇ ಕರಣ್ ಜೋಹರ್ ಈ ಮೂಲಕವೇ ಇಬ್ರಾಹಿಂನನ್ನ ಲಾಂಚ್ ಮಾಡಲು ಮುಂದಾಗಿದ್ದಾರೆ ಅಂತಲೇ ಹೇಳಲಾಗುತ್ತಿದೆ.
PublicNext
30/05/2022 01:43 pm