ನವದೆಹಲಿ: ಇಂದು ಐಪಿಎಲ್ ಎರಡನೇ ಕ್ವಾಲಿಫಯರ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ನಡೆಯಲಿದೆ. ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಈ ಬಾರಿ ಐಪಿಎಲ್ ಟ್ರೋಫಿ ಯಾವ ತಂಡ ಗೆಲ್ಲಲಿದೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಈ ಬಾರಿಯ ಐಪಿಎಲ್ ಕಪ್‌ಅನ್ನು ಬೆಂಗಳೂರು ತಂಡ ಗೆಲ್ಲಲಿದೆ. ಈ ಬಾರಿ ಆರ್‌ಸಿಬಿ ಬೌಲಿಂಗ್, ಬ್ಯಾಟಿಂಗ್, ಫಿಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಸಮತೋಲನದಿಂದ ಕೂಡಿದೆ. ಹೀಗಾಗಿ ರಾಜಸ್ತಾನ್ ವಿರುದ್ಧದ ಪಂದ್ಯ ಗೆದ್ದು ಫೈನಲ್‌ನಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹರ್ಭಜನ್ ಈ ಹೇಳಿಕೆಯು ಆರ್‌ಸಿಬಿ ಅಭಿಮಾನಿಗಳಿಗೆ ಮತ್ತಷ್ಟು ಸಂತಸವನ್ನು ತಂದಿದೆ.
PublicNext
27/05/2022 06:54 pm