ಮುಂಬೈ: ಐಪಿಎಲ್ 2022ರಲ್ಲಿ ಎಲ್ಲಾ 10 ತಂಡಗಳಿಂದ ಈವರೆಗೂ 1,001 ಸಿಕ್ಸರ್ ದಾಖಲಾಗಿವೆ. ಇದು ಐಪಿಎಲ್‌ನ ಆವೃತ್ತಿಯೊಂದರಲ್ಲಿ ದಾಖಲಾದ ಅತ್ಯಧಿಕ ಸಿಕ್ಸರ್ ಇದಾಗಿದೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅತಿ ಹೆಚ್ಚು ಸಿಕ್ಸರ್‌ಗಳನ್ನು (116) ಸಿಡಿಸಿದೆ. ನಂತರದ ಸ್ಥಾನದಲ್ಲಿರುವ ಕೆಕೆಆರ್ 113 ಮತ್ತು ಪಂಜಾಬ್ ಕಿಂಗ್ಸ್ 110 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವಿಚಿತ್ರವೆಂದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಸಿಕ್ಸರ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ 69 ಸಿಕ್ಸರ್ ದಾಖಲಿಸಿದೆ.
PublicNext
23/05/2022 12:33 pm