ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಹೈವೋಲ್ಟೇಜ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಈ ಮೂಲಕ ಡೆಲ್ಲಿ ಪ್ಲೇ ಕನಸು ಭಗ್ನಗೊಳಿಸಿದೆ.
ಡೆಲ್ಲಿ ನೀಡಿದ ಗುರಿ ಬೆನ್ನತ್ತಿದ ಮುಂಬೈ 5 ವಿಕೆಟ್ ನಷ್ಟಕ್ಕೆ 19.1 ಓವರ್ಗೆ 160 ರನ್ ಗಳಿಸಿದರು. ಮುಂಬೈ ಪರ ಇಶಾನ್ ಕಿಶನ್ 48, ಬ್ರೆವೀಸ್ 37, ಟೀಂ ಡೇವಿಡ್ 34, ತಿಲಕ್ ವರ್ಮಾ 21 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿದೆ. ವಾರ್ನರ್, ಮಾರ್ಶ್, ಪೃಥ್ವಿ ಶಾ ಔಟ್ ಆದ ಬಳಿಜ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರಿಷಭ್ ಪಂತ್ 39, ಪೋವೆಲ್ 43 ರನ್ ಗಳಿಸಿದರು. ಇನ್ನು, ಪೃಥ್ವಿ ಶಾ 24, ಅಕ್ಷರ್ ಪಟೇಲ್ 19 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಾಯ ಮಾಡಿದ್ದರು.
PublicNext
21/05/2022 11:32 pm